adventitious ಆಡ್‍ವೆಂಟಿಷಸ್‍
ಗುಣವಾಚಕ
  1. ಹೊರಗಿನಿಂದ ಬಂದ; ಹೊರಗಿನಿಂದ ತಂದು ಸೇರಿಸಿದ; ಬಾಹ್ಯಸ್ವರೂಪಕ್ಕೆ ಸಂಬಂಧಿಸಿದ; ಆನುಷಂಗಿಕ.
  2. ಆಕಸ್ಮಿಕ; ಅನಿರೀಕ್ಷಿತ: adventitious aid ಆಕಸ್ಮಿಕ ಸಹಾಯ.
  3. (ನ್ಯಾಯಶಾಸ್ತ್ರ) (ಆಸ್ತಿಯ ವಿಷಯದಲ್ಲಿ) ಯಾದೃಚ್ಛಿಕ; ಅದೃಷ್ಟವಶದಿಂದ, ಅಪರಿಚಿತನಿಂದ ಯಾ ದೂರದ ಸಂಬಂಧಿಯಿಂದ–ಬಂದ.
  4. (ಜೀವವಿಜ್ಞಾನ) ಅಸ್ಥಾನಿಕ; ಅಪಸ್ಥಾನಿಕ; ಅನಿಯತ; ಅನಿಯತವಾಗಿ ಯಾ ಅಸಾಧಾರಣ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ: adventitious root ಅಸ್ಥಾನಿಕ ಬೇರು.