adumbrate ಆಡಂಬ್ರೇಟ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ವಿಷಯದಲ್ಲಿ) ಸ್ಥೂಲಚಿತ್ರಣ ಕೊಡು; ರೂಪುರೇಖೆಗಳನ್ನು–ತೋರಿಸು, ಸೂಚಿಸು.
  2. ಸ್ಥೂಲವಾಗಿ (ವಿವರಗಳಿಲ್ಲದೆ) ಸೂಚಿಸು: he just adumbrated his theory without giving details ಅವನು ತನ್ನ ಸಿದ್ಧಾಂತವನ್ನು ವಿವರಗಳನ್ನು ಕೊಡದೆ ಸ್ಥೂಲವಾಗಿ ಸೂಚಿಸಿದನು.
  3. ಸ್ಥೂಲ ಸಂಕೇತವಾಗಿರು; ಪ್ರತಿನಿಧಿಸು: social unrest adumbrated the French revolution ಸಾಮಾಜಿಕ ಕ್ಷೋಭೆಯು ಹ್ರಾನ್ಸಿನ ಮಹಾಕ್ರಾಂತಿಯನ್ನು ಸ್ಥೂಲವಾಗಿ ಸಂಕೇತಿಸಿದ್ದಿತು.
  4. (ಮುಂದೆ ಬರುವುದರ, ಭವಿಷ್ಯದ) ಸುಳುಹು ಕೊಡು; ಮುನ್‍ಸೂಚಿಸು.
  5. ನೆರಳಿನಿಂದ–ಮರೆಸು, ಮರೆಮಾಡು, ಮುಚ್ಚು: his shadow adumbrated my pillow ಅವನ ನೆರಳು ನನ್ನ ತಲೆದಿಂಬನ್ನು ಮರೆಸಿತು.
  6. (ರೂಪಕವಾಗಿ) ಮರೆ ಮಾಡು; ಮುಚ್ಚು; ಮಸುಕುಮಾಡು: defects adumbrate good qualities ದೋಷಗಳು ಗುಣಗಳನ್ನು ಮರೆ ಮಾಡಿಬಿಡುತ್ತವೆ.