See also 2adrift
1adrift ಅಡ್ರಿಹ್ಟ್‍
ಕ್ರಿಯಾವಿಶೇಷಣ
  1. ನೆಲೆ ತಪ್ಪಿ ಅಲೆಯುತ್ತ; ಗೊತ್ತುಗುರಿಯಿಲ್ಲದೆ ಚಲಿಸುತ್ತ.
  2. (ಹಡಗು, ದೋಣಿಗಳ ವಿಷಯದಲ್ಲಿ) (ಗಾಳಿ, ಅಲೆ, ಪ್ರವಾಹಗಳ ಹೊಡೆತಕ್ಕೆ ಸಿಕ್ಕಿ) ಕೊಚ್ಚಿಕೊಂಡು ಹೋಗುತ್ತ.
  3. (ರೂಪಕವಾಗಿ) (ಪರಿಸ್ಥಿತಿಗಳ ಪ್ರಭಾವಕ್ಕೆ ಸಿಕ್ಕಿ) ಕೊಚ್ಚಿಹೋಗುತ್ತ.
  4. (ಆಡುಮಾತು) (ಹಡಗು, ದೋಣಿಗಳ, ವಿಷಯದಲ್ಲಿ) ಕಟ್ಟಿಹಾಕದೆ; ಲಂಗರು–ತಪ್ಪಿ, ಕಡಿದು; ಕಟ್ಟು ತಪ್ಪಿ; ನಿಯಂತ್ರಣದಲ್ಲಿಲ್ಲದೆ.
  5. (ಆಡುಮಾತು) ಸಂಪರ್ಕ ಕಡಿದು; ಸಂಬಂಧ ತಪ್ಪಿ: cut oneself adrift from one’s relatives ಸಂಬಂಧಿಗಳ ಸಂಪರ್ಕ ಕಡಿದುಕೊ.
  6. (ಆಡುಮಾತು) ಜಾಡುತಪ್ಪಿ; ಕ್ರಮತಪ್ಪಿ.
  7. ರಕ್ಷಣೆಯಿಲ್ಲದೆ; ಅನಾಥರಾಗಿ; ದಿಕ್ಕಿಲ್ಲದೆ; ದಿಕ್ಕುಕೆಟ್ಟು; ಹೇಳುವವರು ಕೇಳುವವರು ಇಲ್ಲದೆ; ಸಮಾಜದಲ್ಲಿ ನಿರ್ದಿಷ್ಟ ಸ್ಥಾನಮಾನವಿಲ್ಲದೆ.
See also 1adrift
2adrift ಅಡ್ರಿಹ್ಟ್‍
ಆಖ್ಯಾತಕ ಗುಣವಾಚಕ
  1. ನೆಲೆ ತಪ್ಪಿ ಅಲೆಯುತ್ತಿರುವ; ಗೊತ್ತುಗುರಿಯಿಲ್ಲದೆ ಚಲಿಸುತ್ತಿರುವ.
  2. (ಹಡಗು, ದೋಣಿಗಳ ವಿಷಯದಲ್ಲಿ) (ಗಾಳಿ, ಅಲೆ, ಪ್ರವಾಹಗಳ ಹೊಡೆತಕ್ಕೆ ಸಿಕ್ಕಿ) ಕೊಚ್ಚಿಕೊಂಡು ಹೋಗುತ್ತಿರುವ; ದಿಕ್ಕು ತಪ್ಪಿ ತೇಲಿ ಹೋಗುತ್ತಿರುವ.
  3. (ರೂಪಕವಾಗಿ) (ಪರಿಸ್ಥಿತಿಗಳ ಪ್ರಭಾವಕ್ಕೆ ಸಿಕ್ಕಿ) ಕೊಚ್ಚಿಕೊಂಡು ಹೋಗುತ್ತಿರುವ.
  4. (ಹಡಗು ದೋಣಿಗಳ ವಿಷಯದಲ್ಲಿ) ಲಂಗರು–ಕಡಿದ, ತಪ್ಪಿದ; ಕಟ್ಟಿಹಾಕಿದ; ನಿಯಂತ್ರಣದಲ್ಲಿಲ್ಲದ.
  5. (ಆಡುಮಾತು) ಸಂಪರ್ಕ ಕಡಿದುಕೊಂಡ; ಸಂಬಂಧ ವಿಚ್ಛೇದಿಸಿಕೊಂಡ.
  6. (ಆಡುಮಾತು) ಜಾಡು ತಪ್ಪಿದ; ಕ್ರಮ ತಪ್ಪಿದ.
  7. ರಕ್ಷಣೆಯಿಲ್ಲದ ಅನಾಥರಾದ; ದಿಕ್ಕುಗೆಟ್ಟ: young people adrift in a lawless society ಕಾನೂನುರಹಿತ ಸಮಾಜದಲ್ಲಿಯ ಅನಾಥ ಯುವಕರು.
ಪದಗುಚ್ಛ

turn somebody adrift ಹಣ, ಸಹಾಯ ಯಾ ಉದ್ಯೋಗ ಯಾವುದನ್ನೂ ನೀಡದೆ ಒಬ್ಬನನ್ನು (ಮನೆ ಮೊದಲಾದವುಗಳಿಂದ) ಕಳುಹಿಸಿಬಿಡು, ಓಡಿಸಿಬಿಡು.