adopt ಅಡಾಪ್ಟ್‍
ಸಕರ್ಮಕ ಕ್ರಿಯಾಪದ
  1. ಹೊಸ ನೆಂಟು ಕಲ್ಪಿಸಿಕೊ; (ಮುಖ್ಯವಾಗಿ) ದತ್ತು ತೆಗೆದುಕೊ.
  2. (ಇತರರಿಂದ ಅಭಿಪ್ರಾಯ ಮೊದಲಾದವನ್ನು) ಸ್ವೀಕರಿಸು; ತೆಗೆದುಕೊ; ಪರಿಗ್ರಹಿಸು; ಗ್ರಹಿಸಿ ತನ್ನದಾಗಿಸಿಕೊ.
  3. ಆಯು; ಆರಿಸಿಕೊ; ಆಯ್ದುಕೊ: they adopted Kannada as their medium ಅವರು ಕನ್ನಡವನ್ನು ತಮ್ಮ ಮಾಧ್ಯಮವನ್ನಾಗಿ ಆರಿಸಿಕೊಂಡರು.
  4. (ಬ್ರಿಟಿಷ್‍ ಪ್ರಯೋಗ) (ಸ್ಥಳೀಯ ಸಂಸ್ಥೆಯ ಆಡಳಿತದ ವಿಷಯದಲ್ಲಿ) (ರಸ್ತೆ ಮೊದಲಾದವುಗಳ) ದುರಸ್ತಿಯ ಜವಾಬ್ದಾರಿ ವಹಿಸಿಕೊ, ಹೊಣೆ ಹೊತ್ತುಕೊ.
  5. ಸಮ್ಮತಿಸು; ಒಪ್ಪಿಕೊ; ಅನುಮೋದಿಸು; ಅಂಗೀಕರಿಸು: the report was adopted ಆ ವರದಿ ಅಂಗೀಕೃತವಾಯಿತು.