admissible ಅಡ್‍ಮಿಸಿ(ಸ)ಬ್‍ಲ್‍
ಗುಣವಾಚಕ
  1. (ಅಭಿಪ್ರಾಯ ಯಾ ಯೋಜನೆಗಳ ವಿಷಯದಲ್ಲಿ) ಅಂಗೀಕರಿಸಬಹುದಾದ; ಒಪ್ಪಿಕೊಳ್ಳಬಹುದಾದ; ಗ್ರಾಹ್ಯ; ಸ್ವೀಕಾರಾರ್ಹ; ಅಂಗೀಕಾರಾರ್ಹ.
  2. (ನ್ಯಾಯಶಾಸ್ತ್ರ) ಸಾಕ್ಷ್ಯವೆಂದು ಅಂಗೀಕರಿಸಬಹುದಾದ; ರುಜುವಾತಾಗಿ ಒಪ್ಪಬಹುದಾದ.
  3. (ಅಧಿಕಾರ ಯಾ ಸ್ಥಾನಕ್ಕೆ) ಸೇರಿಸಿಕೊಳ್ಳಲು–ಯೋಗ್ಯವಾದ, ಅರ್ಹವಾದ.