admiralty ಆಡ್‍ಮರಲಿಟಿ
ನಾಮವಾಚಕ
  1. ಆಡ್ಮರಲ್‍–ಪದವಿ, ಹುದ್ದೆ; ನೌಕಾ(ಬಲಾ)ಧಿಪತ್ಯ.
  2. (Admiralty) (ಬ್ರಿಟಿಷ್‍ ಪ್ರಯೋಗ, ಚರಿತ್ರೆ) ನೌಕಾಶಾಖೆ ಯಾ ನೌಕಾಧಿಪತ್ಯ ಕಚೇರಿ; ನೌಕಾಬಲದ ಆಡಳಿತ ನಿರ್ವಹಿಸುವ ಇಲಾಖೆ ಯಾ ಕಚೇರಿ.
  3. (ರೂಪಕವಾಗಿ) ಸಾಗರಾಧಿಪತ್ಯ; ಕಡಲುಗಳ ಯಾ ಸಮುದ್ರಗಳ ಮೇಲಿನ–ಯಾಜಮಾನ್ಯ, ಪ್ರಭುತ್ವ: the price of admiralty ಸಾಗರಾಧಿಪತ್ಯಕ್ಕೆ ತೆರಬೇಕಾದ ಬೆಲೆ.
  4. (ನ್ಯಾಯಶಾಸ್ತ್ರ) ಕಡಲಕೋರ್ಟು; ಸಮುದ್ರ ನ್ಯಾಯಾಲಯ; ಸಮುದ್ರ ಸಂಚಾರಕ್ಕೆ ಸಂಬಂಧಿಸಿದ ವಿಷಯ, ವಿವಾದ, ಅಪರಾಧಗಳನ್ನು ವಿಚಾರಮಾಡಿ ತೀರ್ಪುಕೊಡಲು ರಚಿಸಿದ ನೌಕಾಶಾಖೆಯ ನ್ಯಾಯಸ್ಥಾನ.
ಪದಗುಚ್ಛ
  1. Admiralty Board = admiralty(2).
  2. Court of Admiralty = admiralty(4).
  3. Lords Commissioners of Admiralty = admiralty(2).
  4. the Admiralty = admiralty(2).
  5. the price of admiralty = admiralty(3).