admiral ಆಡ್‍ಮರಲ್‍
ನಾಮವಾಚಕ
  1. ಆಡ್ಮರಲ್‍:
    1. ಪ್ರಧಾನ ನೌಕಾ(ಬಲಾ)ಧಿಪತಿ.
    2. ಉನ್ನತ ದರ್ಜೆಯ ನೌಕಾಧಿಕಾರಿ.
    3. ಹಡಗುಗಳ ಪಡೆಯೊಂದರ ಯಾ ತಂಡವೊಂದರ ಅಧಿಪತಿ.
  2. ವ್ಯಾಪಾರದ ಯಾ ಮೀನುಗಾರಿಕೆಯ ಹಡಗುಗಳ ತಂಡದ ಪ್ರಧಾನ ನೌಕೆ.
  3. ನಿಶಾನೆ–ಹಡಗು, ನೌಕೆ; ಪ್ರಧಾನ ನೌಕಾಧಿಪತಿ (ಇರುವ) ಹಡಗು.
  4. ನಿಂಫಾಲಿಡೆ ವಂಶದ ಉಜ್ಜ್ವಲ ವರ್ಣಗಳಿಂದ ಕೂಡಿದ ಪತಂಗದ ಹುಳು, ಚಿಟ್ಟೆ, ಪಾತರಗಿತ್ತಿ: red admiral ಕೆಂಪು–ಪತಂಗ, ಚಿಟ್ಟೆ. white admiral ಬಿಳಿ–ಪತಂಗ, ಚಿಟ್ಟೆ.
ಪದಗುಚ್ಛ
  1. Admiral of the Fleet ಆಡ್ಮರಲ್‍ ಆಹ್‍ ದಿ ಹ್ಲೀಟ್‍; ನೌಕಾದಳಾಧಿಪತಿ; ಬ್ರಿಟನ್ನಿನ ಭೂ ಸೈನ್ಯದ ಹೀಲ್ಡ್‍ ಮಾರ್ಷಲ್‍ ದರ್ಜೆಗೆ ಸಮಾನವಾದ ದರ್ಜೆಯ ನೌಕಾಧಿಕಾರಿ.
  2. Fleet Admiral (ಅಮೆರಿಕನ್‍ ಪ್ರಯೋಗ) = ಪದಗುಚ್ಛ\((1)\).
  3. Lord High Admiral (ಬ್ರಿಟಿಷ್‍ ಪ್ರಯೋಗ) ಲಾರ್ಡ್‍ ಹೈ ಆಡ್ಮರಲ್‍; ಬ್ರಿಟನ್ನಿನ ದೊರೆಯ ಬಿರುದು.
  4. rear-admiral (ಬ್ರಿಟಿಷ್‍ ಪ್ರಯೋಗ) ರೇರ್‍ ಆಡ್ಮರಲ್‍; ವೈಸ್‍ ಆಡ್ಮರಲ್‍ಗಿಂತ ಕೆಳದರ್ಜೆಯ, ಭೂಸೈನ್ಯದ ಮೇಜರ್‍ ಜನರಲ್‍ ದರ್ಜೆಗೆ ಸಮಾನವಾದ ದರ್ಜೆಯ ನೌಕಾಧಿಕಾರಿ.
  5. vice-admiral (ಬ್ರಿಟಿಷ್‍ ಪ್ರಯೋಗ) ಆಡ್ಮರಲ್‍ಗಿಂತ ಕೆಳದರ್ಜೆಯ, ಭೂಸೈನ್ಯದ ಲೆಹ್ಟನಂಟ್‍ ಜನರಲ್‍ ದರ್ಜೆಗೆ ಸಮಾನವಾದ ದರ್ಜೆಯ ನೌಕಾಧಿಕಾರಿ.