administrator ಅಡ್‍ಮಿನಿಸ್ಟ್ರೇಟರ್‍
ನಾಮವಾಚಕ
  1. ಆಡಳಿತಗಾರ; ಕಾರ್ಯನಿರ್ವಾಹಕ; ಕಾರಬಾರಿ; ಆಡಳಿತವನ್ನು ನಡಸುವ ಯಾ ವ್ಯವಸ್ಥೆ ಮಾಡಬಲ್ಲ ವ್ಯಕ್ತಿ.
  2. (ನ್ಯಾಯ, ಮತಸಂಸ್ಕಾರ, ಮೊದಲಾದವನ್ನು) ವಿಧಿಸುವವ.
  3. (ಔಷಧ ಮೊದಲಾದವನ್ನು) ಕೊಡುವಾತ; ಕುಡಿಸುವಾತ.
  4. (ನ್ಯಾಯಶಾಸ್ತ್ರ) ಆಸ್ತಿನಿರ್ವಾಹಕ; ಹಕ್ಕುದಾರನ ಆಸ್ತಿನಿರ್ವಾಹಕ; ಹಕ್ಕುದಾರನ ಆಸ್ತಿಯನ್ನು ಅವನು ಪ್ರಾಪ್ತವಯಸ್ಕನಾಗುವವರೆಗೆ ನೋಡಿಕೊಳ್ಳಲು ಯಾ ತಕ್ಕ ಅಧಿಕಾರಿಗಳನ್ನು ನೇಮಕ ಮಾಡದೆ ಸತ್ತವನ ಆಸ್ತಿಯನ್ನು ನೋಡಿಕೊಳ್ಳಲು ಅಧಿಕಾರ ಪಡೆದವನು.