administer ಅಡ್‍ಮಿನಿಸ್ಟರ್‍
ಸಕರ್ಮಕ ಕ್ರಿಯಾಪದ
  1. (ಸರ್ಕಾರ, ಗೃಹಕೃತ್ಯ, ಮೊದಲಾದ ವ್ಯವಹಾರಗಳನ್ನು) ನಡಸು; ನೋಡಿಕೊ; ಆಡಳಿತ ನಿರ್ವಹಿಸು.
  2. (ಪ್ರಮಾಣ ವಚನವನ್ನು) ವಿಧಿವತ್ತಾಗಿ ಮಾಡಿಸು; ತೆಗೆದುಕೊಳ್ಳುವಂತೆ ಮಾಡು: administer an oath ಪ್ರಮಾಣ ಮಾಡಿಸು.
  3. (ಮತಸಂಸ್ಕಾರವನ್ನು, ನ್ಯಾಯವನ್ನು) ವಿಧಿವತ್ತಾಗಿ ನೀಡು; ವಿಧಿಸು: administer punishment ಶಿಕ್ಷೆ ನೀಡು. administer justice ನ್ಯಾಯ ನೀಡು; ನ್ಯಾಯಾಧಿಪತಿಯ ಕೆಲಸ ನಿರ್ವಹಿಸು.
  4. ಅನ್ವಯಿಸು; ಜಾರಿಗೆ ತರು: administer the law ಕಾನೂನನ್ನು ಜಾರಿಗೆತರು.
  5. ದೊರಕಿಸು; ಒದಗಿಸು; ಕೊಡು; ನೀಡು: administer relief ಪರಿಹಾರವನ್ನು ಒದಗಿಸು.
  6. (ಔಷಧ, ಮುಲಾಮು, ಮೊದಲಾದವನ್ನು) ಕೊಡು; ಹಚ್ಚು; ಲೇಪಿಸು; ಪ್ರಾಶನ ಮಾಡಿಸು; ಕುಡಿಸು.
  7. (ನ್ಯಾಯಶಾಸ್ತ್ರ) ಉಯಿಲು ಯಾ ಕಾನೂನಿನಂತೆ ಆಡಳಿತ ನಿರ್ವಹಿಸು.
ಅಕರ್ಮಕ ಕ್ರಿಯಾಪದ
  1. ಆಡಳಿತ–ನಡಸು, ನಿರ್ವಹಿಸು: government administers ಸರಕಾರ ಆಡಳಿತ ನಡೆಸುತ್ತದೆ.
  2. (ಸೌಕರ್ಯ) ಒದಗಿಸಿಕೊಡು; ಏರ್ಪಾಡು ಮಾಡು: administer to the needs of the poor ಬಡವರ ಅಗತ್ಯಗಳನ್ನು ಒದಗಿಸಿಕೊಡು. administer to one’s comfort ತನ್ನ ಸೌಕರ್ಯ ನೋಡಿಕೊ.