adjustment ಅಜಸ್ಟ್‍ಮಂಟ್‍
ನಾಮವಾಚಕ
  1. ಸರಿಪಡಿಸುವಿಕೆ; ಸರಿಯಾದ ಸ್ಥಿತಿಗೆ ತರುವುದು.
  2. (ಭಿನ್ನತೆಗಳು, ಭಿನ್ನಾಭಿಪ್ರಾಯಗಳ) ಸಮನ್ವಯ; ಸರಿಪಡಿಸುವಿಕೆ.
  3. (ಬೇರೆ ಬೇರೆ ಭಾಗಗಳ ಯಾ ಘಟಕಗಳ) ವ್ಯವಸ್ಥೆಗೊಳಿಸುವಿಕೆ.
  4. (ಯಾವುದೇ ಉದ್ದೇಶಕ್ಕೆ) ಹೊಂದಿಕೊಳ್ಳುವಿಕೆ; ಒಗ್ಗಿಕೊಳ್ಳುವಿಕೆ.
  5. ಹೊಂದಾಣಿಕೆ ಸಾಧನ; ಹೊಂದಿಸುವ ಸಾಧನ: wheels, verniers and other delicate adjustments ಚಕ್ರಗಳು, ವರ್ನಿಯರುಗಳು, ಮೊದಲಾದ ಸೂಕ್ಷ್ಮವಾದ ಹೊಂದಾಣಿಕೆ ಸಾಧನಗಳು.
  6. ಹೊಂದಿಕೆ; ಹೊಂದಾಣಿಕೆ; ಸಮನ್ವಯ; ವ್ಯವಸ್ಥೆ; ಸರಿಹೊಂದಿಸಿದ, ಕ್ರಮಗೊಳಿಸಿದ–ಸ್ಥಿತಿ.