adjunct ಆಜಂಕ್ಟ್‍
ನಾಮವಾಚಕ
  1. ಗೌಣ; ಅನುಷಂಗ; ಅನುಬಂಧ; ಅಪ್ರಧಾನ; ಪ್ರಧಾನವಾದದ್ದಕ್ಕೆ ಅಧೀನವಾದ ವಸ್ತು, ವಿಷಯ, ಗುಣ.
  2. (ಮುಖ್ಯವಾಗಿ ಹಂಗಾಮಿಯಾಗಿರುವ) ಅಧೀನ ನೌಕರ ಯಾ ಸಹಾಯಕ.
  3. (ವ್ಯಾಕರಣ) ವಿಶೇಷಣ; ವಾಕ್ಯದ ಮುಖ್ಯ ಭಾಗಗಳನ್ನು ವಿಸ್ತರಿಸಲು ಬಳಸಿದ ಪದ ಯಾ ಪದಗಳು.
  4. (ತತ್ತ್ವಶಾಸ್ತ್ರ) ಅಮುಖ್ಯ ವಿಶೇಷಣ; ಆನುಷಂಗಿಕ ಲಕ್ಷಣ; ವಿಷಯದ ಸ್ವರೂಪಕ್ಕೆ ಮುಖ್ಯವಲ್ಲದ ಗುಣ, ಲಕ್ಷಣ.