adjudge ಅ(ಆ)ಜಜ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ವಿಷಯವನ್ನು) ವಿಚಾರಣೆ ಮಾಡು.
  2. ನ್ಯಾಯಸಲ್ಲಿಸು; ನ್ಯಾಯತಃ ತೀರ್ಮಾನಿಸು; ಕಾನೂನಿನಂತೆ ನಿರ್ಣಯಿಸು; (ವ್ಯಕ್ತಿ ಯಾ ಸರ್ಕಾರ ಯಾ ಇತರ ಸಂಸ್ಥೆಯು ನಡೆಸಿದ ಕಾರ್ಯ ಮೊದಲಾದವುಗಳ ವಿಷಯದಲ್ಲಿ) ಶಾಸನರೀತ್ಯಾ ಅದು ನ್ಯಾಯ ಇಲ್ಲವೇ ಅನ್ಯಾಯ, ಉಚಿತ ಇಲ್ಲವೇ ಅನುಚಿತ ಎಂಬ ತೀರ್ಪುಕೊಡು.
  3. (ಕಕ್ಷಿಗೋ ಪ್ರತಿಕಕ್ಷಿಗೋ ಸಲ್ಲುವ ಹಕ್ಕು, ದಂಡ, ಮೊದಲಾದವನ್ನು) ಶಾಸನರೀತ್ಯಾ ವಿಧಿಸು; ಕಾನೂನಿನಂತೆ ನೀಡು.