adjournment ಅರ್ಜನ್‍ಮಂಟ್‍
ನಾಮವಾಚಕ
  1. ಮುಂದೂಡಿಕೆ; ಮುಂದೂಡುವಿಕೆ; ಸಭೆ ಮೊದಲಾದವನ್ನು ಗೊತ್ತಾದ ದಿನಕ್ಕೆ ಯಾ ಅನಿರ್ದಿಷ್ಟವಾಗಿ ಮುಂದಕ್ಕೆ ಹಾಕುವುದು.
  2. (ಮಾಡುತ್ತಿರುವ ಕಾರ್ಯ ಮೊದಲಾದವನ್ನು ಮತ್ತೆ ಮುಂದುವರೆಸಲು) ಸದ್ಯಕ್ಕೆ, ಸ್ವಲ್ಪಕಾಲ–ನಿಲ್ಲಿಸುವುದು; ಸ್ಥಗನ; ನಿಲುಗಡೆ; ನಿಲುವಳಿ.
  3. (ಸಭೆ, ವಿಚಾರಣೆ, ಮೊದಲಾದವನ್ನು ಪುನಃ ನಡೆಸುವವರೆಗೂ) ಮುಂದೂಡಿದ ಅವಧಿ; ನಿಲುವಳಿ ಕಾಲ; ಸ್ಥಗನ, ಸ್ಥಗಿತ–ಅವಧಿ.