adequate ಆಡಿಕ್ವ(ಕ್ವಿ)
ಗುಣವಾಚಕ
  1. (ಆವಶ್ಯಕತೆಗಳಿಗೆ) ತಕ್ಕಷ್ಟು; ಬೇಕಾದಷ್ಟು; ಸಾಕಾದಷ್ಟು; ಪರ್ಯಾಪ್ತ.
  2. ಸಮರ್ಪಕವಾದ; ಯಥಾಯೋಗ್ಯ: adequate proof ಸಮರ್ಪಕವಾದ–ಸಾಕ್ಷ್ಯ, ರುಜುವಾತು.
  3. ಬೇಕಾದಷ್ಟು, ಸಾಕಾಗುವಷ್ಟು–ಮಾತ್ರದ: the violinist gave only an adequate performance ಪಿಟೀಲು ವಾದಕ ಸಾಕಾಗುವಷ್ಟು ಮಾತ್ರ ನುಡಿಸಿದ.
  4. (ನ್ಯಾಯಶಾಸ್ತ್ರ) (ಕೋರ್ಟಿನಲ್ಲಿ ಕ್ರಮಜರುಗಿಸಲು) ಸಾಕಾದಷ್ಟು: adequate grounds ಸಾಕಾದಷ್ಟು ಆಧಾರಗಳು.