See also 2addict
1addict ಅಡಿಕ್ಟ್‍
ಸಕರ್ಮಕ ಕ್ರಿಯಾಪದ
  1. (ವಿಶೇಷವಾಗಿ ಕರ್ಮಣಿಪ್ರಯೋಗ) ಕೆಟ್ಟಚಾಳಿ ಹಿಡಿಸು; ಚಟ ಹಿಡಿಸು; ದುರಭ್ಯಾಸಕ್ಕೆ ಬಲಿಬೀಳಿಸು; ವ್ಯಸನಿಯಾಗಿಸು: he is addicted to drink ಆತ ಕುಡಿತದ ಚಟಕ್ಕೆ ಬಿದ್ದಿದ್ದಾನೆ.
  2. (ನ್ಯಾಯಶಾಸ್ತ್ರ) ದಾಸ್ಯವಿಮೋಚನ ಮಾಡು; (ನ್ಯಾಯಾಧಿಪತಿಯ ತೀರ್ಪಿನಂತೆ) ಮಾಲೀಕನ ವಶದಿಂದ ಗುಲಾಮನನ್ನು ಬಿಟ್ಟುಕೊಡು; ಜೀತದಿಂದ ಬಿಡುಗಡೆ ಮಾಡು.
See also 1addict
2addict ಆಡಿಕ್ಟ್‍
ನಾಮವಾಚಕ
  1. (ಯಾವುದೇ ಕೆಟ್ಟ ಅಭ್ಯಾಸದ, ಮುಖ್ಯವಾಗಿ ಅಹೀಮು, ಗಾಂಜಾ, ಮೊದಲಾದ ಮಾದಕ ದ್ರವ್ಯಗಳ) ಚಟ, ಗೀಳು-ಹಿಡಿದವನು; ವ್ಯಸನಿ: morphine addict ಮಾರ್ಹೀನ್‍–ವ್ಯಸನಿ, ಚಟದವನು.
  2. (ಆಡುಮಾತು) (ಆಟಗಳ ಯಾ ಗತಕಾಲದ ಬಗ್ಗೆ) ಅತ್ಯಾಸಕ್ತಿಯುಳ್ಳವನು; ಅತ್ಯುತ್ಸಾಹಿ; ಪ್ರೇಮಿ: film addict ಚಿತ್ರಪ್ರೇಮಿ.