add ಆಡ್‍
ಸಕರ್ಮಕ ಕ್ರಿಯಾಪದ
  1. (ಒಂದನ್ನು ಮತ್ತೊಂದಕ್ಕೆ) ಸೇರಿಸು; ಕೂಡಿಸು: add your efforts to mine ನನ್ನ ಪ್ರಯತ್ನಗಳೊಡನೆ ನಿನ್ನದನ್ನೂ ಸೇರಿಸು.
  2. ಹೆಚ್ಚಿಸು; ಅಧಿಕಗೊಳಿಸಿ; ವೃದ್ಧಿಗೊಳಿಸು: this adds to our difficulties ಇದು ನಮ್ಮ ಕಷ್ಟಗಳನ್ನು ಹೆಚ್ಚಿಸುತ್ತದೆ.
  3. (ಹೇಳಿಕೆಯನ್ನು ಮಾತಿನಲ್ಲಿ ಯಾ ಬರಹದಲ್ಲಿ) ಮುಂದುವರಿಸು: to his previous statement he added this remark ಅವನು ಮುಂಚೆ ಹೇಳಿದ್ದಕ್ಕೆ ಈ ಟೀಕೆಯನ್ನು ಸೇರಿಸಿದ.
  4. (ಗಣಿತ) (ಎರಡು ಯಾ ಹೆಚ್ಚಿನ ಸಂಖ್ಯೆ ಯಾ ಪರಿಮಾಣಗಳನ್ನು) ಕೂಡು; ಸಂಕಲನ ಮಾಡು.
ಅಕರ್ಮಕ ಕ್ರಿಯಾಪದ

(ಎರಡು ಯಾ ಹೆಚ್ಚಿನ ಸಂಖ್ಯೆ ಯಾ ಪರಿಮಾಣಗಳನ್ನು) ಕೂಡು; ಸಂಕಲನ ಮಾಡು.

ಪದಗುಚ್ಛ
  1. add in (ಒಂದು ಸಂಸ್ಥೆ, ಸಂಘ, ಗುಂಪು, ಹಿಂಡು, ಮೊದಲಾದವಕ್ಕೆ) ಸೇರಿಸಿಕೊ.
  2. add together = add(4).
  3. add up
    1. ಮೊತ್ತ ಕಂಡು ಹಿಡಿ; ಒಟ್ಟು ಎಷ್ಟಾಯಿತು ಎನ್ನುವುದನ್ನು ಕಂಡುಹಿಡಿ: add up ten numbers ಹತ್ತು ಅಂಕೆಗಳ ಮೊತ್ತ ಕಂಡುಹಿಡಿ.
    2. (ಆಡುಮಾತು) ಹೊಂದಿಕೆಯಾಗಿರು; ಸಮಂಜಸವಾಗಿರು; ಯುಕ್ತವಾಗಿರು; ಮನಸ್ಸಿಗೆ ಒಪ್ಪಿಗೆಯಾಗುವಂತಿರು: there were aspects of the story that did not add up ಆ ಕಥೆಯಲ್ಲಿ ಕೆಲವು ಅಂಶಗಳು ಹೊಂದಿಕೆಯಾಗುತ್ತಿರಲಿಲ್ಲ.
  4. add up (to)
    1. ಕೂಡಿದಾಗ ಅಷ್ಟಾಗು; ಮೊತ್ತವಾಗು: the figures add up to 365 ಅಂಕಿಗಳನ್ನು ಕೂಡಿದರೆ 365 ಆಗುತ್ತದೆ.
    2. ಸೇರಿ ಅರ್ಥವಾಗು; ಒಟ್ಟಿನಲ್ಲಿ ಸೂಚಿಸು: all that you are saying adds up to this, doesn’t it? ನೀನು ಹೇಳುವ ಎಲ್ಲದರ ಅರ್ಥ ಇಷ್ಟೇ, ಅಲ್ಲವೆ?
ನುಡಿಗಟ್ಟು

add insult to injury ಹುಣ್ಣಿನ ಮೇಲೆ ಬರೆ ಹಾಕು; ಗಾಯದ ಮೇಲೆ ಉಪ್ಪು ಸುರಿ; ಒಬ್ಬನಿಗೆ ಉಂಟು ಮಾಡಿರುವ ನೋವು, ಗಾಯ, ಅನ್ಯಾಯ, ಹಾನಿ, ಮೊದಲಾದವು ಸಾಲದೆಂದು ಅದಕ್ಕೆ ಅಪಮಾನವನ್ನೂ ಸೇರಿಸು.