See also 2act
1act ಆಕ್ಟ್‍
ನಾಮವಾಚಕ
  1. ಕೆಲಸ; ಎಸಕ; ಕಾರ್ಯ; ಕ್ರಿಯೆ; ಕರ್ಮ; ಕೃತ್ಯ: a generous act ಉದಾರ ಕಾರ್ಯ. act of faith ನಂಬಿಕೆಯ ಕೆಲಸ.
  2. ಗೆಯ್ಮೆ; (ಕೆಲಸ, ಕಾರ್ಯ) ಮಾಡುವಿಕೆ; ಮಾಡುವುದು: in word a wise man, in act a fool ಆಡುವುದರಲ್ಲಿ ಜಾಣ, ಮಾಡುವುದರಲ್ಲಿ ಕೋಣ.
  3. (ನ್ಯಾಯಶಾಸ್ತ್ರ) ಕಾಯಿದೆ; ಕಾನೂನು; ಶಾಸನ; ಅಧಿನಿಯಮ; ವಿಧಿ; ನಿಬಂಧನೆ: Defence of India Act ಭಾರತದ ರಕ್ಷಣಾ ಕಾಯಿದೆ.
  4. (ಕಾನೂನುಬದ್ಧ) ಪ್ರಮಾಣಪತ್ರ; ಕಾಯಿದೆ ಪತ್ರ.
  5. (ನಾಟಕದ) ಅಂಕ; ದೃಶ್ಯ.
  6. ದೃಶ್ಯ; ಪ್ರದರ್ಶನ; ಸರ್ಕಸ್ಸಿನ ಯಾ ವಿವಿಧ ವಿನೋದಾವಳಿಯ ಹಲವಾರು ಚಿಕ್ಕಚಿಕ್ಕ ಪ್ರದರ್ಶನಗಳಲ್ಲಿ ಒಂದು.
  7. (ಈ ಪ್ರದರ್ಶನಗಳನ್ನು ಕೊಡುವ) ನಟ(ರು); ಪ್ರದರ್ಶನಕಾರ(ರು).
  8. (ಚರಿತ್ರೆ) ವಿಶ್ವವಿದ್ಯಾನಿಲಯದ ಪದವಿಗಾಗಿ ಅಭ್ಯರ್ಥಿಯು ಸಮರ್ಥಿಸಿಕೊಳ್ಳುವ ಮಹಾಪ್ರಬಂಧ.
  9. ನಟನೆ; ಸೋಗು; ಆಟ.
ಪದಗುಚ್ಛ
  1. act and deed ಖುದ್ದು ರಾಜಿಯಿಂದ ಬರೆದುಕೊಟ್ಟ ಪತ್ರ.
  2. act of contrition ಪಶ್ಚಾತ್ತಾಪ ಪ್ರಾರ್ಥನೆ; ಪಶ್ಚಾತ್ತಾಪದಿಂದ ಹಾಡುವ ಪ್ರಾರ್ಥನಾಗೀತೆ.
  3. act of $^1$grace.
  4. Acts (of the Apostles)ಬೈಬಲ್ಲಿನ ಹೊಸ ಒಡಂಬಡಿಕೆಯ ಒಂದು ಅಧ್ಯಾಯ.
ನುಡಿಗಟ್ಟು
  1. act of god.
  2. get into the act (ಅಶಿಷ್ಟ) (ಮುಖ್ಯವಾಗಿ ಲಾಭಕ್ಕಾಗಿ) ಭಾಗವಹಿಸು.
  3. put on an act (ಆಡುಮಾತು) ನಟಿಸು; ಸೋಗು ಹಾಕು.
See also 1act
2act ಆಕ್ಟ್‍
ಸಕರ್ಮಕ ಕ್ರಿಯಾಪದ
  1. (ಘಟನೆ ಯಾ ಕಥೆಯನ್ನು) ಅಭಿನಯಿಸು.
  2. (ನಾಟಕ, ಸಿನಿಮಾಗಳಲ್ಲಿ ವ್ಯಕ್ತಿಯೊಬ್ಬನ) ವೇಷಹಾಕು; ಪಾತ್ರವಹಿಸು: he acted Macbeth ಅವನು ಮ್ಯಾಕ್‍ಬೆತ್‍ ಪಾತ್ರ ವಹಿಸಿದ.
  3. ನಟಿಸು; ಸೋಗು ಹಾಕು; ನಟನೆ ಮಾಡು: she acted outraged virtue ಶೀಲಕ್ಕೆ ಅಪಚಾರವಾದಂತೆ ನಟಿಸಿದಳು.
  4. ವರ್ತಿಸು; (ನಿರ್ದಿಷ್ಟ ರೀತಿಯಲ್ಲಿ) ನಡೆದುಕೊ: he acted a fool ಅವನು ಮೂರ್ಖನಂತೆ ವರ್ತಿಸಿದ.
ಅಕರ್ಮಕ ಕ್ರಿಯಾಪದ
  1. (ನಾಟಕ, ಸಿನಿಮಾಗಳಲ್ಲಿ) ಅಭಿನಯಿಸು; ನಟಿಸು.
  2. ಸೋಗುಹಾಕು; ನಟಿಸು.
  3. ಕೆಲಸ ಮಾಡು; ಕ್ರಿಯಾಶೀಲನಾಗು: you must act quickly ನೀನು ಬೇಗ ಕೆಲಸ ಮಾಡಬೇಕು.
  4. ನಡೆದುಕೊ; ವರ್ತಿಸು; ವ್ಯವಹರಿಸು: he acted like a fool ಅವನು ಮೂರ್ಖನಂತೆ ವರ್ತಿಸಿದ.
  5. (ಒಬ್ಬ ಅಧಿಕಾರಿಯ) ಕೆಲಸ ನಿರ್ವಹಿಸು; ಕೆಲಸ ಮಾಡು: he acted as Governor for two months ಅವನು ಎರಡು ತಿಂಗಳು ರಾಜ್ಯಪಾಲನಾಗಿ ಕೆಲಸ ಮಾಡಿದ.
  6. ಕಾರ್ಯಕಾರಿಯಾಗು; ಕೆಲಸ ಮಾಡು: ಪರಿಣಾಮಕಾರಿಯಾಗು; ನಿರ್ದಿಷ್ಟ ಕೆಲಸ ನಿರ್ವಹಿಸು: the brake refused to act ಬ್ರೇಕು ಕೆಲಸ ಮಾಡಲಿಲ್ಲ. the drug did not act ಮದ್ದು ಪರಿಣಾಮಕಾರಿಯಾಗಲಿಲ್ಲ. the policeman declined to act ಪೊಲೀಸಿನವನು ಮಾಡಬೇಕಾದ ಕೆಲಸ ಮಾಡಲು ನಿರಾಕರಿಸಿದ.
  7. ಅಭಿನಯಯೋಗ್ಯವಾಗು; ರಂಗಯೋಗ್ಯವಾಗು: this play acts as it reads ಈ ನಾಟಕವು ಓದಲು ಯೋಗ್ಯವಾಗಿರುವಂತೆ ಅಭಿನಯಯೋಗ್ಯವಾಗಿಯೂ ಇದೆ.
  8. ನಾಟಕವನ್ನು–ಆಡು, ಅಭಿನಯಿಸು.
  9. (ನಾಟಕದಲ್ಲಿ) ಪಾತ್ರವಹಿಸು; ವೇಷಹಾಕು.
  10. (ನಾಟಕ ಮೊದಲಾದವುಗಳಲ್ಲಿ) ನಟನಾಗು ಯಾ ನಟಿಯಾಗು.
  11. (ಯಾವುದೇ ಒಂದರ ಮೇಲೆ) ಶಕ್ತಿ ತೋರಿಸು; ಕಾರ್ಯ ಮಾಡು; ಪ್ರಭಾವ ಬೀರು: alcohol acts on the brain ಮದ್ಯ ಮಿದುಳಿನ ಮೇಲೆ ಪ್ರಭಾವ ಬೀರುತ್ತದೆ.
ಪದಗುಚ್ಛ
  1. act as interpreter ದುಭಾಷಿಯಾಗು; ಭಾಷಾಂತರಕಾರನಾಗಿ ವರ್ತಿಸು.
  2. act for (ಒಬ್ಬನ, ಒಂದರ) ಪರವಾಗಿ ಕೆಲಸ ಮಾಡು; ಪ್ರತಿನಿಧಿಸು; ಪ್ರತಿನಿಧಿಯಾಗು; ಪ್ರತಿನಿಧಿಯಂತೆ ವರ್ತಿಸು.
  3. act out (ಭಾವನೆ, ಕಲ್ಪನೆ, ಮೊದಲಾದವುಗಳನ್ನು) ಕಾರ್ಯಕ್ಕಿಳಿಸು; ಕಾರ್ಯಗತ ಮಾಡು.
  4. act the part ತಕ್ಕಂತೆ, ಅನುಗುಣವಾಗಿ–ವರ್ತಿಸು, ನಡೆದುಕೊ.
  5. act up
    1. (ಆಡುಮಾತು) ಅಯೋಗ್ಯವಾಗಿ ವರ್ತಿಸು; ಕೆಟ್ಟ ರೀತಿಯಲ್ಲಿ ನಡೆದುಕೊ.
    2. = ಪದಗುಚ್ಛ\((6)\).
  6. act (up)on ಅನುಸಾರ ಕೆಲಸ ಮಾಡು; ಕಾರ್ಯ–ನಿರ್ವಹಿಸು, ಸಾಧಿಸು: act (up)on a suggestion ಸೂಚನೆಯಂತೆ ನಡೆದುಕೊ.
  7. act up to ಅಂತೆ ಅನುಗುಣವಾಗಿ, ಅನುಸಾರವಾಗಿ–ನಡೆದುಕೊ, ಪಾಲಿಸು, ಅನುಸರಿಸು: act upto a principle ತತ್ತ್ವಕ್ಕನುಗುಣವಾಗಿ ನಡೆದುಕೊ.
ACT
ಸಂಕ್ಷಿಪ್ತ

Australian Capital Territory.