See also 2acrostic
1acrostic ಅಕ್ರಾಸ್ಟಿಕ್‍
ನಾಮವಾಚಕ
  1. ಪದ್ಯಬಂಧ; ಚಕ್ರಬಂಧ; ಕವನದ ಯಾ ಇತರ ಸಾಹಿತ್ಯಕೃತಿಯ ಪ್ರತಿ ಪಂಕ್ತಿಯ ಪ್ರಥಮ ಅಕ್ಷರಗಳನ್ನು ಯಾ ಪ್ರಥಮ ಅಂತಿಮ ಅಕ್ಷರಗಳನ್ನು, ಯಾ ಪ್ರಥಮ ಮಧ್ಯಮ ಅಂತಿಮ ಅಕ್ಷರಗಳನ್ನು ಯಾವುದಾದರೂ ಒಂದು ಕ್ರಮದಲ್ಲಿ ತೆಗೆದುಕೊಂಡರೆ ಒಂದು ಪದವೋ ವಾಕ್ಯವೋ ಆಗುವಂತೆ ಚಮತ್ಕಾರವಾಗಿ ಹೆಣೆದ ಪದ್ಯ.
  2. ವರ್ಣಮಾಲಿಕೆ ಯಾ ಅಕ್ಷರ ಮಾಲಿಕೆ; ಪಾದಗಳ ಪ್ರಥಮಾಕ್ಷರಗಳು ವರ್ಣಮಾಲಾನುಕ್ರಮದಲ್ಲಿರುವ (ಮುಖ್ಯವಾಗಿ ಹೀಬ್ರೂ) ಪದ್ಯ.
  3. = acronym.
  4. ಚಿತ್ರಾಕ್ಷರಿ; ಸಮ ಉದ್ದದ ಹಲವಾರು ಪದಗಳನ್ನು ಒಂದರ ಕೆಳಗೊಂದು ಬರೆದು, ಮೇಲಿನಿಂದ ಕೆಳಕ್ಕೆ ಓದಿದರೂ ಅದೇ ಪದಗಳಾಗುವಂತಹ ಒಂದು ರಚನೆ. Figure: acrostic_4
ಪದಗುಚ್ಛ
  1. double acrostic ಆದ್ಯಂತ್ಯಾಕ್ಷರಿ; ಮೊದಲ ಮತ್ತು ಕೊನೆಯ ಅಕ್ಷರಗಳ ಬಂಧ.
  2. single acrostic ಆದ್ಯಕ್ಷರಿ; ಮೊದಲಕ್ಷರ ಬಂಧ.
  3. triple acrostic ಆದಿಮಧ್ಯಾಂತ್ಯಾಕ್ಷರಿ; ಮೊದಲ, ಮಧ್ಯದ ಮತ್ತು ಕೊನೆಯ ಅಕ್ಷರಗಳ ಬಂಧ.
See also 1acrostic
2acrostic ಅಕ್ರಾಸ್ಟಿಕ್‍
ಗುಣವಾಚಕ

ಪದ್ಯಬಂಧ ಯಾ ಪ್ರಥಮಾಕ್ಷರಿ ಯಾ ಚಿತ್ರಾಕ್ಷರಿ; ಇವುಗಳಿಗೆ ಸಂಬಂಧಿಸಿದ ಯಾ ಇವುಗಳನ್ನುಳ್ಳ ಯಾ ಇವುಗಳಂತಿರುವ.