See also 2across
1across ಅಕ್ರಾಸ್‍
ಕ್ರಿಯಾವಿಶೇಷಣ
  1. ಶಿಲುಬೆಯಾಕಾರದಲ್ಲಿ; ಅಡ್ಡಲಾಗಿ; ಅಡ್ಡಹಾಯುತ್ತ; ಪರಸ್ಪರ ಛೇದಿಸುವಂತೆ; ಒಂದರ ಮೇಲೆ ಇನ್ನೊಂದು ಹಾಯುವಂತೆ: a line drawn across ಅಡ್ಡಲಾಗಿ ಎಳೆದ ಗೆರೆ.
  2. ಒಂದು ಕಡೆಯಿಂದ ಇನ್ನೊಂದು ಕಡೆಗೆ; ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ; ಅಡ್ಡಡ್ಡಲಾಗಿ: run across ಈ ಕಡೆಯಿಂದ ಆ ಕಡೆಗೆ (ಅಡ್ಡಡ್ಡಲಾಗಿ) ಓಡು. stretched across ಅಡ್ಡಡ್ಡಲಾಗಿ ಎಳೆದು ಕಟ್ಟಿದ. half a mile across ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಮೈಲಿ.
  3. ಆ ಕಡೆಯಲ್ಲಿ; ಆ ಬದಿಯಲ್ಲಿ; ಆಚೆ ಕಡೆಗೆ; ಆ ಪಕ್ಕಕ್ಕೆ: by this time he is across ಇಷ್ಟುಹೊತ್ತಿಗೆ ಅವನು ಆಚೆ ದಡ ತಲುಪಿದ್ದಾನೆ.
ನುಡಿಗಟ್ಟು
  1. across from ಎದುರಿನಲ್ಲಿ; ಎದುರುಗಡೆ: the bank is just across from the school ಬ್ಯಾಂಕು ಸ್ಕೂಲಿನ ನೇರ ಎದುರಿನಲ್ಲಿದೆ.
  2. come across.
  3. $^1$get across.
  4. put it across
    1. (ಯಾವುದನ್ನೇ) ಅರ್ಥವಾಗುವಂತೆ–ತಿಳಿಸು, ಹೇಳು, ವಿವರಿಸು.
    2. (ಅಶಿಷ್ಟ) ಮೋಸ ಮಾಡು; ವಂಚಿಸು.
    3. (ಅಶಿಷ್ಟ) ಪೀಟಿ ಮಾಡು; (ಒಬ್ಬನು ಮಾಡಿದ ಮೋಸ, ಅಪಕಾರ, ದ್ರೋಹ, ಮೊದಲಾದವಕ್ಕೆ) ಪ್ರತಿ ಮೋಸ, ಅಪಕಾರ, ದ್ರೋಹ, ಮೊದಲಾದವನ್ನು ಮಾಡು; ಸೇಡು, ಮುಯ್ಯಿ–ತೀರಿಸಿಕೊ.
  5. $^1$run across.
See also 1across
2across ಅಕ್ರಾಸ್‍
ಉಪಸರ್ಗ
  1. ಅಡ್ಡಲಾಗಿ; ಅಡ್ಡಹಾಯುವಂತೆ: keep this board across the other ಈ ಹಲಗೆಯನ್ನು ಇನ್ನೊಂದಕ್ಕೆ ಅಡ್ಡಲಾಗಿ ಇಡು.
  2. ಅಡ್ಡಡ್ಡಲಾಗಿ; ಒಂದು ಕಡೆಯಿಂದ ಇನ್ನೊಂದು ಕಡೆಗೆ: swim across the lake ಸರೋವರದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಈಜಿಹೋಗು.
  3. ಸಂಧಿಸುವಂತೆ; ಸೇರುವಂತೆ; ಸಂಪರ್ಕದಲ್ಲಿ; ಸಂಪರ್ಕಕ್ಕೆ; ಕಾಣುವಂತೆ: came across a blind man ಒಬ್ಬ ಕುರುಡನನ್ನು ಕಂಡ, ಸಂಧಿಸಿದ.
  4. ಆ ಬದಿ; ಆ ಪಕ್ಕ; ಆಚೆ ಕಡೆ; ಆ ಕಡೆ: the shop is across the street ಅಂಗಡಿಯು ರಸ್ತೆಯ ಆ ಕಡೆ ಇದೆ. by this time he is across the channel ಇಷ್ಟು ಹೊತ್ತಿಗೆ ಅವನು ಕಾಲುವೆಯ ಆ ದಡ ಮುಟ್ಟಿದ್ದಾನೆ.
ನುಡಿಗಟ್ಟು
  1. across the board (ಅಮೆರಿಕನ್‍ ಪ್ರಯೋಗ) ಎಲ್ಲರಿಗೂ ಅನ್ವಯಿಸುವಂತೆ; ಸಾರ್ವಜನಿಕವಾಗಿ: the company raised wages across the board ಆ ಕಂಪನಿಯು ಎಲ್ಲರಿಗೂ ಅನ್ವಯಿಸುವಂತೆ (ಸಾರ್ವಜನಿಕವಾಗಿ) ವೇತನವನ್ನು ಹೆಚ್ಚಿಸಿತು.
  2. king across the water
    1. ಸಮುದ್ರದ ಆಚೆ ಹೋಗಿರುವ ರಾಜ.
    2. (ರೂಪಕವಾಗಿ) ರಾಜ್ಯಭ್ರಷ್ಟ ದೊರೆ; ದೇಶಾಂತರ ಹೋಗಿರುವ ರಾಜ.
  3. $^1$put (it) across.