acquit ಅಕ್ವಿಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ acquitting ಭೂತರೂಪ ಮತ್ತು ಭೂತಕೃದಂತ acquitted).
  1. (ಪ್ರಾಚೀನ ಪ್ರಯೋಗ) (ಸಾಲ) ತೀರಿಸು.
  2. (ಆಪಾದನೆಯಿಂದ ಯಾ ಆರೋಪದಿಂದ ವ್ಯಕ್ತಿಯನ್ನು) ಬಿಡುಗಡೆ ಮಾಡು; ಖುಲಾಸೆ ಮಾಡು; ವಿಮೋಚಿಸು; ವಿಮುಕ್ತಗೊಳಿಸು; ನಿರಪರಾಧಿಯೆಂದು ಘೋಷಿಸು.
  3. ಹೊರೆಯನ್ನು ಯಾ ಕರ್ತವ್ಯ ಭಾರವನ್ನು ಇಳಿಸಿಕೊ; ಹೊಣೆ ತೀರಿಸು; ಜವಾಬ್ದಾರಿ ನಿರ್ವಹಿಸು.
  4. ನಡೆದುಕೊ; ವರ್ತಿಸು: he acquitted himself well like a hero ಅವನು ಒಬ್ಬ ವೀರನಂತೆ ಸರಿಯಾಗಿ ನಡೆದುಕೊಂಡ.
ಪದಗುಚ್ಛ
  1. acquit oneself ill ಕಾರ್ಯವನ್ನು ಅಸಮರ್ಪಕವಾಗಿ–ಮಾಡು, ನಿರ್ವಹಿಸು.
  2. acquit oneself of (ಕರ್ತವ್ಯ, ಹೊಣೆಗಾರಿಕೆಗಳನ್ನು) ನಿರ್ವಹಿಸು; ನಡಸು; ನೆರವೇರಿಸು.
  3. acquit oneself well ಕಾರ್ಯವನ್ನು ಸಮರ್ಪಕವಾಗಿ–ಮಾಡು, ನಿಭಾಯಿಸು, ನಿರ್ವಹಿಸು.