acoustic ಅಕೂಸ್ಟಿಕ್‍
ಗುಣವಾಚಕ
  1. ಶ್ರವಣದ; ಶ್ರಾವ; ಶ್ರವಣೇಂದ್ರಿಯದ ಯಾ ಧ್ವನಿವಿಜ್ಞಾನದ ಯಾ ಧ್ವನಿ ತರಂಗಗಳ.
  2. (ಕಟ್ಟಡಕ್ಕೆ ಬಳಸುವ ವಸ್ತುಗಳ ವಿಷಯದಲ್ಲಿ) ಶಬ್ದನಿಯಂತ್ರಕ; ಶಬ್ದವನ್ನು ನಿರೋಧಿಸಲು ಬಳಸುವ; ಧ್ವನಿಯನ್ನು ನಿಯಂತ್ರಸುವಂತೆ ರಚಿಸಲಾದ.
  3. (ಸಿಡಿಮದ್ದಿನ ವಿಷಯದಲ್ಲಿ) ಶಬ್ದಸ್ಫೋಟಕ; ನೀರಿನ ಒಳಗೆ ಪ್ರಸಾರವಾಗುವ ಧ್ವನಿಯ ಅಲೆಗಳಿಂದ ಸ್ಫೋಟಗೊಳಿಸುವಂಥ, ಸ್ಫೋಟಗೊಳಿಸಬಹುದಾದ.
  4. (ಸಂಗೀತ ಮೊದಲಾದವು) (ವಾದ್ಯದ ಯಾ ಧ್ವನಿಮುದ್ರಣದ ವಿಷಯದಲ್ಲಿ) ವಿದ್ಯುತ್ತಿಲ್ಲದೆ (ಧ್ವನಿಯ ತರಂಗಗಳಿಂದಲೇ) ಆಗುವ.