acknowledge ಅ(ಆ)ಕ್ನಾಲಿಜ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ವಿಷಯದಲ್ಲಿ) ಸರಿಯೆಂದು, ನಿಜವೆಂದು–ಒಪ್ಪಿಕೊ: he acknowledged his defeat ಅವನು ಸೋಲನ್ನು ಒಪ್ಪಿಕೊಂಡನು.
  2. (ತನ್ನದೆಂದು ಯಾ ತನಗೆ ತಿಳಿಯದೆಂದು) ಒಪ್ಪಿಕೊ; ಅಂಗೀಕರಿಸು: does he acknowledge the signature? ರುಜು ತನ್ನದೆಂದು ಒಪ್ಪಿಕೊಳ್ಳುತ್ತಾನೆಯೆ?
  3. ಗಣಿಸು; ಪರಿಗಣಿಸು; ಮಾನ್ಯಮಾಡು: they acknowledged him their leader ಅವರು ಅವನನ್ನು ನಾಯಕನೆಂದು ಪರಿಗಣಿಸಿದರು.
  4. ಸಂದಿತೆಂದು ತಿಳಿಸು; ಸಲ್ಲಿಕೆ ಕೊಡು: he acknowledged the gift ಉಡುಗೊರೆ ಸಂದಿತೆಂದು ಅವನು ತಿಳಿಸಿದನು.
  5. ಉಪಕಾರ ಸ್ಮರಿಸು; ಕೃತಜ್ಞತೆ ಸೂಚಿಸು: they acknowledged his services ಅವರು ಅವನ ಸೇವೆಗಾಗಿ ಕೃತಜ್ಞತೆ ಸೂಚಿಸಿದರು.
  6. ಗುರುತಿಸು: he did not even acknowledge me ಅವನು ನನ್ನನ್ನು ಗುರುತಿಸಲೂ ಇಲ್ಲ.
  7. (ಕಾನೂನುರೀತ್ಯಾ) ಮಾನ್ಯತೆ ಯಾ ಮನ್ನಣೆ ನೀಡು; ಅಂಗೀಕರಿಸು; ಒಪ್ಪಿಗೆ ಕೊಡು.
  8. ಅಧಿಕಾರ ಯಾ ಹಕ್ಕನ್ನು ಮಾನ್ಯ ಮಾಡು.
  9. (ಸೇವೆಗಾಗಿ) ಬಹುಮಾನಿಸು.