achievement ಅಚೀವ್‍ಮಂಟ್‍
ನಾಮವಾಚಕ
  1. ಸಾಧಿಸುವಿಕೆ; ನೆರವೇರಿಸುವಿಕೆ; ಮುಗಿಸುವಿಕೆ; ಪೂರೈಕೆ; ಸಾಧನೆ; ನಿರ್ವಹಣ.
  2. ಮಹತ್ಸಾಧನೆ; ಮಹಾಕಾರ್ಯಸಿದ್ಧಿ: the achievement of Columbus ಕೊಲಂಬಸನ ಮಹತ್ಸಾಧನೆ.
  3. (ವಂಶಲಾಂಛನ ವಿದ್ಯೆ) ದೊಡ್ಡ ಕೆಲಸಕ್ಕಾಗಿ, ಸಾಧನೆಗಾಗಿ ಕೊಟ್ಟ ಲಾಂಛನ.
  4. (ಮನಶ್ಶಾಸ್ತ್ರ) ಪರೀಕ್ಷಾ ಸಾಧನೆ; ಪರೀಕ್ಷಾ ನಿರ್ವಹಣೆ; ಪರೀಕ್ಷೆಯಲ್ಲಿ ಯಾ ಪರೀಕ್ಷಾ ಪ್ರಯೋಗದಲ್ಲಿ ಮಾಡಿದುದು.