acetaldehyde ಆಸಿಟ್ಯಾಲ್ಡಿಹೈಡ್‍
ನಾಮವಾಚಕ

(ರಸಾಯನವಿಜ್ಞಾನ) ಆಸಿಟ್ಯಾಲ್ಡಿಹೈಡು; ತೆರೆದ ಸರಣಿ ಆಲ್ಡಿಹೈಡುಗಳಲ್ಲಿ ಎರಡನೆಯದು; ಈಥೈಲ್‍ ಆಲ್ಕಹಾಲಿನ ಉತ್ಕರ್ಷಣದಿಂದ ಉತ್ಪತ್ತಿಯಾಗುವ, ಬಣ್ಣವಿಲ್ಲದ, ನೀರಿನಲ್ಲಿ ಕರಗುವ, ಕಟುವಾದ ಹಣ್ಣಿನಂಥ ವಾಸನೆಯುಳ್ಳ ಸುಲಭವಾಗಿ ಬಾಷ್ಪವಾಗುವ, ಕನ್ನಡಿಗಳಿಗೆ ಲೇಪ ಹಾಕುವಲ್ಲಿ ಹಾಗೂ ಕಾರ್ಬನಿಕ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಬಳಸುವ ಆಲ್ಡಿಹೈಡು, ${\rm CH}_3{\rm CHO}$.