acetabulum ಆಸಿಟ್ಯಾಬ್ಯುಲಮ್‍
ನಾಮವಾಚಕ
(ಬಹುವಚನ acetabula).
  1. (ಪ್ರಾಚೀನ ರೋಮನರು ಬಳಸುತ್ತಿದ್ದ) ಚುಕ್ರಪಾತ್ರೆ; ಸಿರ್ಕಪಾತ್ರೆ; ಊಟದ ಮೇಜಿನ ಮೇಲೆ ಬಳಸುವ ವಿನಿಗರ್‍ ಮೊದಲಾದ ಪಾನೀಯಗಳ ಪುಟ್ಟ ಬಟ್ಟಲು.
  2. (ಕಟಲ್‍ ಮೀನು ಮೊದಲಾದವುಗಳ) ಆಸಿಟ್ಯಾಬ್ಯುಲಮ್‍; ಬಟ್ಟಲಿನಾಕಾರದ, ಆಹಾರ ಹೀರುವ ಅಂಗ.
  3. (ಅಂಗರಚನಾಶಾಸ್ತ್ರ) ಕುದುರು; ತೊಡೆಯ ಕೀಲು ಆಡುವ ಎಲುಬಿನ ಕುಳಿ.
  4. (ಅಂಗರಚನಾಶಾಸ್ತ್ರ) ಕೀಟಗಳ ಕಾಲಿನ ಸಂದುಕುಳಿ.