acephalous ಅಸೆಹಲಸ್‍
ಗುಣವಾಚಕ
  1. ತಲೆಯಿಲ್ಲದ; ಅಶಿರ; ಶಿರೋರಹಿತ.
  2. ಮುಖಂಡನಿಲ್ಲದ; ನಾಯಕರಹಿತ; ನಾಯಕನನ್ನು ಅಂಗೀಕರಿಸದ.
  3. (ಪ್ರಾಣಿವಿಜ್ಞಾನ) ಅಶಿರ; ಶಿರೋರಹಿತ; ತಲೆಯು ಎದೆಯೊಡನೆ ಸೇರಿಕೊಂಡಿರುವ; ದೇಹದಲ್ಲಿ ತಲೆಯ ಭಾಗವಿಲ್ಲದ.
  4. (ಸಸ್ಯವಿಜ್ಞಾನ) ಛಿನ್ನಾಗ್ರ; ತಲೆ ಕತ್ತರಿಸಿದ; ತಲೆ ಮೊಟಕಾದ.
  5. (ಹಸ್ತಪ್ರತಿ, ಪದ್ಯ, ಮೊದಲಾದವುಗಳ ವಿಷಯದಲ್ಲಿ) ಛಿನ್ನಾದಿ; ಪ್ರತಿಯ ಮೊದಲ ಭಾಗ ಯಾ ಪಂಕ್ತಿಯ ಮೊದಲ ಗಣ ಇಲ್ಲದ.