accretion ಅ(ಆ)ಕ್ರೀಷನ್‍
ನಾಮವಾಚಕ
  1. ನಿರಂತರ ವಿಕಾಸ; ನಿರಂತರವಾದ ಆಂತರಿಕ ಬೆಳೆವಣಿಗೆ.
  2. ಒಂದುಗೂಡಿಕೆ; ಸಂಚಯನ; ಪ್ರತ್ಯೇಕವಾದ ಕಣಗಳು ಮೊದಲಾದವು ಸೇರಿಕೊಂಡು ದೊಡ್ಡದಾಗುವಿಕೆ.
  3. ಸಂಚಯ; ಉಪಚಯ; ವೃದ್ಧಿ; ಪ್ರತ್ಯೇಕವಾದ ಕಣಗಳು ಮೊದಲಾದವು ಒಂದುಗೂಡುವುದರಿಂದ ಆದದ್ದು.
  4. ಕೂಡಿಕೆ; ಸೇರಿಕೆ; ಪ್ರಕ್ಷೇಪ(ಣ); ಹೊರತಾದ್ದನ್ನು ವಸ್ತುವಿಗೆ ಸೇರಿಸಿದ ಅನ್ಯ ವಸ್ತು.
  5. ಸೇರ್ಪಡೆ; ಒಂದು ರಾಷ್ಟ್ರಕ್ಕೆ ಒಂದು ಪ್ರದೇಶ ಸೇರುವುದು.
  6. (ನ್ಯಾಯಶಾಸ್ತ್ರ) = accession(7).
  7. (ನ್ಯಾಯಶಾಸ್ತ್ರ) (ಬೇರೆ ವಾರಸುದಾರರ ಅಭಾವದಿಂದ) ಒಬ್ಬನಿಗೆ ಆಸ್ತಿ ಪಾಸ್ತಿ ಸೇರುವುದು; ಆಸ್ತಿವೃದ್ಧಿ.