See also 2account
1account ಅಕೌಂಟ್‍
ಸಕರ್ಮಕ ಕ್ರಿಯಾಪದ
  1. (ಗತಪ್ರಯೋಗ) ಲೆಕ್ಕಿಸು; ಗಣಿಸು.
  2. ಎಣಿಸು; ಪರಿಗಣಿಸು: account a hero, wise, to be guilty ಅವನನ್ನು ಶೂರ, ವಿವೇಕಿ, ಅಪರಾಧಿ ಎಂದು ಪರಿಗಣಿಸು.
ಅಕರ್ಮಕ ಕ್ರಿಯಾಪದ
  1. ಲೆಕ್ಕಿಸು; ಲೆಕ್ಕಮಾಡು; ಗಣಿಸು.
  2. (ಹಣದ) ಲೆಕ್ಕ ಕೊಡು; ಲೆಕ್ಕ ಒಪ್ಪಿಸು: the broker accounted satisfactorily for his expenditures ಆ ದಳ್ಳಾಳಿ ತನ್ನ ಖರ್ಚುವೆಚ್ಚಗಳಿಗೆ ತೃಪ್ತಿಕರವಾಗಿ ಲೆಕ್ಕ ಒಪ್ಪಿಸಿದ.
  3. ಕಾರಣ ಕೊಡು; ಕಾರಣ ವಿವರಿಸು; ವಿವರಣೆ ನೀಡು; ಸಮಜಾಯಿಷಿ ನೀಡು; ಸಮಾಧಾನ ಕೊಡು: account for the accident ಆ ಆಕಸ್ಮಿಕಕ್ಕೆ ಕಾರಣ ಕೊಡು. that accounts for it ಅದಕ್ಕೆ ಸಮಜಾಯಿಷಿ ಅದು.
  4. (ಸಾವು, ಸೋಲು, ವಜಾ, ಮೊದಲಾದವುಗಳಿಗೆ) ಕಾರಣವಾಗು; ಕಾರಣವಾಗಿರು: his rash driving accounted for the accident ಅವನು ದುಡುಕಿನಿಂದ ವಾಹನ ನಡೆಸಿದ್ದು ಅಪಘಾತಕ್ಕೆ ಕಾರಣವಾಯಿತು.
  5. ಕೊಂದು ಹಾಕು; ಮುಗಿಸಿ ಬಿಡು; ಪೂರೈಸಿಬಿಡು; ತೀರಿಸಿಬಿಡು: his dog accounted for two of the rabbits ಅವನ ನಾಯಿಯು ಮೊಲಗಳ ಪೈಕಿ ಎರಡನ್ನು ತೀರಿಸಿ ಬಿಟ್ಟಿತು.
See also 1account
2account ಅಕೌಂಟ್‍
ನಾಮವಾಚಕ
  1. ಲೆಕ್ಕಾಚಾರ; ಎಣಿಕೆ;
  2. ಜಮಾಖರ್ಚಿನ ಲೆಕ್ಕ, ಲೆಕ್ಕಾಚಾರ.
  3. (ಜಮಾಖರ್ಚಿನ) ಖಾತೆ; ವರದಿ; ವಿವರಣೆ.
  4. ಎಣಿಕೆ; ಪರಿಗಣನೆ: he stands high in their account ಅವರ ಎಣಿಕೆಯಲ್ಲಿ ಅವನ ಸ್ಥಾನ ಉನ್ನತವಾದದ್ದು.
  5. ಬ್ಯಾಂಕು ಮೊದಲಾದವುಗಳ ಲೆಕ್ಕ, ಖಾತೆ.
  6. ಸಮಜಾಯಿಷಿ; ಸಮಾಧಾನ; ತೃಪ್ತಿಕರ ವಿವರಣೆ: his account for his conduct was not satisfactory ಅವನ ನಡತೆಯ ಬಗ್ಗೆ ಕೊಟ್ಟ ಸಮಾಧಾನ ತೃಪ್ತಿಕರವಾಗಿರಲಿಲ್ಲ.
  7. ಪ್ರಾಮುಖ್ಯ; ಗಣ್ಯತೆ: a man of account ಗಣ್ಯವ್ಯಕ್ತಿ.
  8. (ವ್ಯಕ್ತಿ, ಘಟನೆ, ಮೊದಲಾದವುಗಳ ಬಗೆಗೆ) ವರದಿ; ಕಥನ; ವಿವರಣೆ.
  9. ಲಾಭ; ಪ್ರಯೋಜನ; ಉಪಯೋಗ: invest one’s money to good account ಹಣವನ್ನು ಒಳ್ಳೆಯ ಲಾಭಕ್ಕಾಗಿ ಹೂಡು.
  10. ಸ್ಟಾಕ್‍ ಎಕ್ಸ್‍ಚೇಂಜ್‍ನಲ್ಲಿ ನಿಯತಕಾಲಿಕವಾಗಿ ಲೆಕ್ಕಗಳನ್ನು ಫೈಸಲು ಮಾಡುವುದು.
  11. (ಸಂಗೀತ ಕೃತಿ ಮೊದಲಾದವುಗಳ) ಗಾಯನ ಯಾ ವಾದನ.
ಪದಗುಚ್ಛ
  1. ask an account
    1. ಲೆಕ್ಕಾಚಾರ ಕೇಳು.
    2. ವಿವರಣೆ ಯಾ ಸಮಜಾಯಿಷಿ ಕೇಳು.
  2. cast accounts ಲೆಕ್ಕಾಚಾರ ಮಾಡು; ಲೆಕ್ಕ ಹಾಕು.
  3. close an account with ಶಿಲ್ಕು ತೋರಿಸಿ ಲೆಕ್ಕದ ಖಾತೆ ಮುಗಿಸು.
  4. current account ಕರಂಟ್‍ ಅಕೌಂಟ್‍; ಚಾಲ್ತಿ ಅಕೌಂಟು.
  5. demand an account = ಪದಗುಚ್ಛ\((1)\).
  6. for the account of ಒಬ್ಬನ ಲೆಕ್ಕಕ್ಕೆ.
  7. in account with (ಒಬ್ಬರೊಡನೆ) ಹಣದ ವ್ಯವಹಾರ ಇಟ್ಟುಕೊಂಡಿರು.
  8. joint account ಜಾಯಿಂಟ್‍ ಅಕೌಂಟು; ಜಂಟಿ ಲೆಕ್ಕ ಖಾತೆ; ಇಬ್ಬರ ಯಾ ಅದಕ್ಕಿಂತ ಹೆಚ್ಚು ಮಂದಿಯ ಹೆಸರಿನಲ್ಲಿ ತೆರೆಯುವ ಲೆಕ್ಕದ ಖಾತೆ.
  9. keep accounts ಖರ್ಚಿನ ಲೆಕ್ಕ ಇಡು; (ಆದಾಯದೊಡನೆ ಹೋಲಿಕೆಗೋಸ್ಕರ) ಎಲ್ಲ ಖರ್ಚುಗಳ ಲೆಕ್ಕ–ಇಡು, ಬರೆ.
  10. money of account ಸಾಕ್ಷಾತ್ತಾಗಿ ನಾಣ್ಯ ಮೊದಲಾದ ರೂಪದಲ್ಲಿಲ್ಲದ ಹಣದ ಮೊತ್ತ; ಲೆಕ್ಕದಲ್ಲಿರುವ ಯಾ ಖಾತೆಯಲ್ಲಿರುವ ಹಣ; ಖಾತೆ ಹಣ.
  11. open an account with (ಹಣದ ಲೆಕ್ಕದ) ಖಾತೆ ಆರಂಭಿಸು, ತೆರೆ.
  12. profit and loss account ಲಾಭ ನಷ್ಟದ ಖಾತೆ.
  13. sale for the account ಸ್ಟಾಕ್‍ ಎಕ್ಸ್‍ಚೇಂಜ್‍ನಲ್ಲಿ ನಗದಿಗಲ್ಲದೆ ಮುಂದಿನ ವಾಯಿದೆಗೆ ಬೆಲೆ ಸಲ್ಲಿಸುವಂತಹ ಮಾರಾಟ.
ನುಡಿಗಟ್ಟು
  1. account to settle ತೀರಿಸಲಿರುವ ಮುಯ್ಯಿ.
  2. balance accounts with (person) ಒಬ್ಬನೊಡನೆ ಲೆಕ್ಕಾಚಾರ ಪೂರೈಸಿಕೊ, ಪೂರೈಸು; ಲೆಕ್ಕಾಚಾರದ ವರದಿಯಲ್ಲಿ ತೋರಿಸಿರುವ ಉಳಿಕೆಯನ್ನು ಕೊಡು ಯಾ ತೆಗೆದುಕೊ.
  3. bring to account (ನಡವಳಿಕೆಗೆ, ವರ್ತನೆಗೆ) ಕಾರಣ ಕೇಳು; ವಿವರಣೆ ಕೊಡುವಂತೆ ಮಾಡು.
  4. by all accounts ಪ್ರತಿಯೊಬ್ಬರ ಯಾ ಎಲ್ಲರ ಅಭಿಪ್ರಾಯದಲ್ಲಿ.
  5. call to account = ನುಡಿಗಟ್ಟು\((3)\).
  6. give account of ಕಾರಣ ವಿವರಿಸು; ವಿವರಣೆ ಕೊಡು.
  7. give a good account of oneself
    1. ಜಯಶೀಲನಾಗು; ಯಶಸ್ವಿಯಾಗು.
    2. ಸಮರ್ಥಿಸಿಕೊ; ಒಳ್ಳೆಯ ಅಭಿಪ್ರಾಯ ಮೂಡಿಸು.
  8. gone to his account ಲೆಕ್ಕ ಒಪ್ಪಿಸಿಬಿಟ್ಟ; ಸತ್ತ.
  9. lay one’s account with (ಯಾವುದನ್ನೇ) ಲೆಕ್ಕಾಚಾರದಲ್ಲಿ ಸೇರಿಸಿಕೊ.
  10. leave out of account ಎಣಿಸದಿರು; ಲೆಕ್ಕಕ್ಕೆ ಯಾ ಗಣನೆಗೆ ತೆಗೆದುಕೊಳ್ಳದೆ ಬಿಟ್ಟುಬಿಡು; ಪರಿಗಣಿಸದಿರು.
  11. make little account of (ವ್ಯಕ್ತಿಗೆ, ವಸ್ತುವಿಗೆ, ವಿಷಯಕ್ಕೆ) ಬೆಲೆ ಕೊಡದೆ ಇರು; ಉಪೇಕ್ಷಿಸು; ಗಮನ ಕೊಡದಿರು.
  12. on account ತಾತ್ಕಾಲಿಕ ಸಲುವಳಿ; ಒಂದು ವ್ಯವಹಾರದಲ್ಲಿ ಸದ್ಯಕ್ಕೆ ಅಂದಾಜಿನ ಮೇಲೆ ಕೊಟ್ಟ ಹಣ.
  13. on account of ಈ ಕಾರಣದಿಂದ; ಅದರಿಂದ.
  14. on no account ಸುತಾರಾಂ, ಬಿಲ್‍ಕುಲ್‍, ಯಾವುದೇ ಕಾರಣಕ್ಕಾಗಲಿ, ಸರ್ವಥಾ, ಖಂಡಿತ–ಇಲ್ಲ.
  15. on one’s account ಸ್ವಂತಕ್ಕಾಗಿ; ಒಬ್ಬನಿಗಾಗಿ; ಒಬ್ಬನಿಗೋಸ್ಕರ; ಒಬ್ಬನ ಉಪಕಾರಕ್ಕಾಗಿ.
  16. on one’s own account
    1. ತನಗಾಗಿ; ತನಗೋಸ್ಕರ.
    2. ಸ್ವಂತ ಜವಾಬ್ದಾರಿಯ ಮೇಲೆ.
  17. render an account ಲೆಕ್ಕಾಚಾರ ಒಪ್ಪಿಸು.
  18. settle accounts with (person)
    1. = ನುಡಿಗಟ್ಟು\((2)\).
    2. (ರೂಪಕವಾಗಿ) ಮುಯ್ಯಿ ತೀರಿಸಿಕೊ; ಸೇಡು ತೀರಿಸಿಕೊ.
  19. square accounts with (person)= ನುಡಿಗಟ್ಟು\((2)\).
  20. take account of ಲೆಕ್ಕಕ್ಕೆ, ಗಮನಕ್ಕೆ, ಗಣನೆಗೆ–ತೆಗೆದುಕೊ.
  21. the great account (ಯೆಹೂದ್ಯ, ಕ್ರೈಸ್ತ, ಇಸ್ಲಾಂಗಳಲ್ಲಿ) ಅಂತಿಮ ವಿಚಾರಣೆಯ ದಿನ.
  22. turn to (good) account ಲಾಭ–ಪಡೆದುಕೊ, ಗಳಿಸಿಕೊ; ಲಾಭದಾಯಕವಾಗಿಸಿಕೊ.
  23. yield an account = ನುಡಿಗಟ್ಟು\((17)\).