accomplishment ಅಕಾಂ(ಕಂ)ಪ್ಲಿಷ್‍ಮಂಟ್‍
ನಾಮವಾಚಕ
  1. ನೆರವೇರಿಕೆ; ಈಡೇರಿಕೆ; ನಿರ್ವಹಣ; ಸಾಧನೆ.
  2. ಮುಗಿವು; ಪೂರಯಿಕೆ; ಪೂರ್ಣಗೊಳಿಕೆ.
  3. ಸಾಧನೆ; ಮಾಡಿದ್ದು; ಪಡೆದದ್ದು; ಸಾಧಿಸಿದ್ದು.
  4. ಸಂಸ್ಕೃತಿ; ಸುಶಿಕ್ಷಣ; ಮುಖ್ಯವಾಗಿ ಸಮಾಜದಲ್ಲಿ ಸುಸಂಸ್ಕೃತನೆನಿಸಲು ಪಡೆದಿರಬೇಕಾದ ಶಿಕ್ಷಣ, ಸಂಸ್ಕಾರ.
  5. (ಹೀನಾರ್ಥಕ ಪ್ರಯೋಗ) ಥಳಕು; (ಮೇಲು ಮೇಲಿನ) ಮೆರಗು; ಬೆಡಗು ಬಿನ್ನಾಣ.
  6. (ಯಾವುದೇ ವಿದ್ಯೆ ಯಾ ಕಲೆಯಲ್ಲಿ) ಕೌಶಲ; ಕುಶಲತೆ; ನೈಪುಣ್ಯ; ಸಂಪನ್ನತೆ: painting is one of her accomplishments ಅವಳ ಕುಶಲತೆಗಳಲ್ಲಿ ಚಿತ್ರಕಲೆಯೂ ಒಂದು.