accommodation ಅಕಾಮಡೇಷನ್‍
ನಾಮವಾಚಕ
  1. ಹೊಂದಿಕೆ; ಹೊಂದಾಣಿಕೆ; ಸರಿಹೊಂದಿಸಿಕೊಳ್ಳುವುದು: the accommodation of the eye to the distinct vision of distant objects ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಕಣ್ಣನ್ನು ಸರಿಹೊಂದಿಸಿಕೊಳ್ಳುವುದು.
  2. (ಯಾವುದೇ ವಸ್ತುವನ್ನು ಮೂಲಕ್ಕಿಂತ ಭಿನ್ನವಾದ ಒಂದು ಉದ್ದೇಶಕ್ಕೆ ಹಾಗೂ ಪದ, ವಾಕ್ಯ, ಮೊದಲಾದವುಗಳನ್ನು ಮೂಲಕ್ಕಿಂತ ಭಿನ್ನವಾದ ಒಂದು ಅರ್ಥಕ್ಕೆ) ಹೊಂದಿಸಿಕೊಳ್ಳುವುದು.
  3. ಹೊಂದಿಕೊಳ್ಳುವುದು.
  4. ರಾಜಿ; ಒಪ್ಪಂದ: the question of reaching an accommodation with Japan ಜಪಾನಿನೊಡನೆ ರಾಜಿಗೆ ಬರುವ ಪ್ರಶ್ನೆ.
  5. ಆನುಕೂಲ್ಯ; ಸೌಕರ್ಯ: providing fans for the accommodation of passengers ಪ್ರಯಾಣಿಕರ ಸೌಕರ್ಯಕ್ಕಾಗಿ ಹ್ಯಾನುಗಳನ್ನು ಒದಗಿಸುವುದು.
  6. (ಹಣದ) ಸಾಲ.
  7. ತಾವು; ಎಡೆ; ಅವಕಾಶ; ವಸತಿ; ಸ್ಥಳ; ಜಾಗ.
  8. (ಅಮೆರಿಕನ್‍ ಪ್ರಯೋಗ, ಬಹುವಚನದಲ್ಲಿ)
    1. ವಸತಿ.
    2. ಊಟ ಮತ್ತು ವಸತಿ.
    3. (ವಾಹನ ಮೊದಲಾದವುಗಳಲ್ಲಿ) ಆಸನ; ಜಾಗ.
ಪದಗುಚ್ಛ

accommodation unit ಮನೆ; ವಸತಿ.