accommodate ಅಕಾಮಡೇಟ್‍
ಸಕರ್ಮಕ ಕ್ರಿಯಾಪದ
  1. (ಒಂದು ವಸ್ತುವನ್ನಾಗಲಿ, ವ್ಯಕ್ತಿಯನ್ನಾಗಲಿ ಮತ್ತೊಂದಕ್ಕೆ) ಸರಿಹೊಂದಿಸು; ಹೊಂದಿಕೆ ಮಾಡು.
  2. (ಹೇಳಿಕೆ, ವಾದ, ಮೊದಲಾದವುಗಳನ್ನು) ಸಮನ್ವಯ ಮಾಡು.
  3. (ವ್ಯಕ್ತಿಗಳ ನಡುವೆ) ಸಾಮರಸ್ಯ ಏರ್ಪಡಿಸು; ಭಿನ್ನಾಭಿಪ್ರಾಯ ಪರಿಹರಿಸು.
  4. ದೊರಕಿಸಿ ಕೊಡು; ಒದಗಿಸಿಕೊಡು; ಹವಣಿಸಿಕೊಡು: the bank will accommodate him with a loan ಬ್ಯಾಂಕು ಅವನಿಗೆ ಸಾಲವನ್ನು ಒದಗಿಸಿಕೊಡುತ್ತದೆ.
  5. (ಮುಖ್ಯವಾಗಿ ಯಾವುದೇ ಆಧಾರ ಯಾ ಜಾಮೀನು ಇಲ್ಲದೆ) ಸಾಲ ಕೊಡು.
  6. ಉಪಕರಿಸು; ಸಹಾಯ ಮಾಡು.
  7. ಸ್ಥಳ ಕೊಡು; ಅವಕಾಶ ಒದಗಿಸು; ವಸತಿ ಕಲ್ಪಿಸು; ತಾವು ಕೊಡು; ಎಡೆ ಮಾಡಿಕೊಡು.