accident ಆಕ್ಸಿಡನ್ಟ್‍
ನಾಮವಾಚಕ
  1. ಆಕಸ್ಮಿಕ; ಅನಿರೀಕ್ಷಿತ ಘಟನೆ; ಯಾದೃಚ್ಛಿಕ ಘಟನೆ.
  2. ಅಪಘಾತ; ವಿಪತ್ತು; ಪ್ರಮಾದ.
  3. ಅದೃಷ್ಟ; ದೈವಯೋಗ.
  4. (ಭೂದೃಶ್ಯ ಮೊದಲಾದವುಗಳ ಮೇಲ್ಮೈ ವಿಷಯದಲ್ಲಿ) ಕ್ರಮರಹಿತ–ವಿನ್ಯಾಸ, ರಚನೆ; ಉಬ್ಬು ತಗ್ಗು: accidents of the moon ಚಂದ್ರನ ಮೇಲ್ಮೈಯ ಉಬ್ಬು ತಗ್ಗು.
  5. ಆಗಂತುಕ ಲಕ್ಷಣ; ಪದಾರ್ಥವೊಂದರ ಸ್ವರೂಪದ ಭಾಗವಲ್ಲವೆಂದು ಭಾವಿತವಾಗಿರುವ ಅಂಶ ಯಾ ಗುಣ, ಉದಾಹರಣೆಗೆ ಪ್ರಭುಭೋಜನ ಕೂಟದಲ್ಲಿ ಪ್ರಸಾದವಾಗಿ ನೀಡುವ ಬ್ರೆಡ್ಡು ಮತ್ತು ಮದ್ಯ ಏಸುಕ್ರಿಸ್ತನ ದೇಹ ಮತ್ತು ರಕ್ತವಾಗಿ ರೂಪಾಂತರಗೊಂಡಾಗ ಅವುಗಳಲ್ಲಿ ಉಳಿದುಕೊಂಡಿರುವ ಭೌತಿಕದ್ರವ್ಯದ ಅಂಶಗಳು ಯಾ ಲಕ್ಷಣಗಳು.
  6. ಗೌಣಾಂಶ; ಅಮುಖ್ಯಾಂಶ; ಅಪ್ರಧಾನಾಂಶ.
  7. ದುರದೃಷ್ಟಕರ ಘಟನೆ; ದುರ್ಘಟನೆ; ಮುಖ್ಯವಾಗಿ ಹಾನಿಯನ್ನು ಯಾ ನಷ್ಟವನ್ನು ಉಂಟುಮಾಡುವ ಘಟನೆ.
ಪದಗುಚ್ಛ
  1. by accident
    1. ಅಕಸ್ಮಾತ್ತಾಗಿ; ಆಕಸ್ಮಿಕವಾಗಿ.
    2. ಅದೃಷ್ಟವಶಾತ್‍.
  2. by accident or design ಅಕಸ್ಮಾತ್ತಾಗಿಯೋ ಉದ್ದೇಶಪೂರ್ವಕವಾಗಿಯೋ.
  3. accident insurance ಅಪಘಾತ ವಿಮೆ; ಅಪಘಾತಗಳಿಂದೊದಗುವ ಹಾನಿ, ನಷ್ಟ, ಮೊದಲಾದವುಗಳಿಂದ ರಕ್ಷಿಸಿಕೊಳ್ಳಲು ಮಾಡಿಕೊಳ್ಳುವ ವಿಮೆ.
  4. chapter of accidents ಅನಿರೀಕ್ಷಿತ ಘಟನಾವಳಿ; ಅನಿರೀಕ್ಷಿತ ಘಟನೆಗಳ ಪರಂಪರೆ.