See also 2accession
1accession ಅ(ಆ)ಕ್ಸೆಷನ್‍
ನಾಮವಾಚಕ
  1. ಪ್ರವೇಶ; ಸನ್ನಿಧಿಗೆ, ಸಮ್ಮುಖಕ್ಕೆ, ಹತ್ತಿರಕ್ಕೆ–ಬರುವುದು.
  2. ಪ್ರಾಪ್ತಿ; ಸ್ಥಿತಿಗೆ, ಅಧಿಕಾರಕ್ಕೆ, ಹಕ್ಕುದಾರಿಕೆಗೆ, ಪದವಿಗೆ, ಪಟ್ಟಕ್ಕೆ–ಬರುವುದು.
  3. ವಯಸ್ಸಿಗೆ ಬರುವುದು; ಪ್ರಾಪ್ತ ವಯಸ್ಕನಾ(ಳಾ)ಗುವುದು: accession to womanhood ಪ್ರಾಪ್ತವಯಸ್ಕಳಾಗುವುದು. on his accession to the estate ಅವನು ವಯಸ್ಸಿಗೆ ಬರುತ್ತಲೇ.
  4. ಕೂಡಿಕೆ; ಸೇರ್ಪಡೆ; ಸೇರಿಕೆ; ದಾಖಲಾತಿ: accession of native states to the Indian Government ಭಾರತ ಸರ್ಕಾರಕ್ಕೆ ದೇಶೀಯ ಸಂಸ್ಥಾನಗಳ ಸೇರ್ಪಡೆ.
  5. (ಒಪ್ಪಂದ ಮೊದಲಾದವುಗಳಿಗೆ ವಿಧಿವತ್ತಾದ) ಒಪ್ಪಿಗೆ; ಸಮ್ಮತಿ; ಅಂಗೀಕಾರ; ಅನುಮೋದನೆ: accession to a demand ಬೇಡಿಕೆಗೆ ಒಪ್ಪಿಗೆ.
  6. ಸೇರಿಸಿದ್ದು; ದಾಖಲಾದದ್ದು: an accession to the library ಗಂಥಾಲಯಕ್ಕೆ ಸೇರಿಸಿದ್ದು (ಪುಸ್ತಕ).
  7. (ನ್ಯಾಯಶಾಸ್ತ್ರ) ಆಸ್ತಿಯ ವೃದ್ಧಿ ಯಾ ಬೆಳೆವಣಿಗೆ; ಸ್ವತ್ತನ್ನು ರೂಢಿಸಿಕೊಳ್ಳುವುದು ಯಾ ಅದರ ಸ್ವಾಭಾವಿಕ ಅಭಿವೃದ್ಧಿ.
See also 1accession
2accession ಅ(ಆ)ಕ್ಸೆಷನ್‍
ಸಕರ್ಮಕ ಕ್ರಿಯಾಪದ

(ಗ್ರಂಥಾಲಯಕ್ಕೆ ಹೊಸ ಪುಸ್ತಕಗಳನ್ನು) ಸೇರಿಸು; ದಾಖಲು ಮಾಡು; ಗ್ರಂಥಾಲಯಕ್ಕೆ ಬಂದ ಹೊಸ ಪುಸ್ತಕಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸು.