access ಆಕ್ಸೆಸ್‍
ನಾಮವಾಚಕ
  1. (ಪ್ರವೇಶಕ್ಕೆ, ತಲಪುವುದಕ್ಕೆ) ಹಾದಿ; ದಾರಿ; ಮಾರ್ಗ; ಬಾಟೆ: the new road gives access to the sea ಹೊಸ ರಸ್ತೆಯು ಸಮುದ್ರಕ್ಕೆ ಪ್ರವೇಶಮಾರ್ಗ ಒದಗಿಸುತ್ತದೆ.
  2. ಸೇರಿಕೆ; ಕೂಡಿಕೆ; ಸಂಕಲನ: sudden access of wealth ಇದ್ದಕ್ಕಿದ್ದಂತೆ ಆದ ಐಶ್ವರ್ಯದ ಸೇರಿಕೆ.
  3. ಪ್ರವೇಶದ–ಅಧಿಕಾರ, ಹಕ್ಕು, ಅವಕಾಶ, ಅಪ್ಪಣೆ, ಅನುಮತಿ: access to the prime minister ಪ್ರಧಾನಿಯವರ ಬಳಿಗೆ ಹೋಗಲು ಅನುಮತಿ. access to good books ಒಳ್ಳೆಯ ಪುಸ್ತಕಗಳನ್ನು ಓದಲು ಅವಕಾಶ.
  4. ಸುಲಭಗಮ್ಯತೆ; ಸರ್ವಸುಲಭವಾಗಿರುವಿಕೆ; ಯಾರು ಬೇಕಾದರೂ ಹತ್ತಿರ ಬರಲು, ಸಮೀಪಿಸಲು ಅವಕಾಶ ಕೊಡುವ ಗುಣ ಯಾ ಅವಕಾಶ ಕೊಡುವಿಕೆ.
  5. (ಯಾವುದನ್ನೇ ಸಮೀಪಿಸಲು, ತಲಪಲು) ಹಾದಿ; ಮಾರ್ಗ; ದ್ವಾರ; ಬಾಗಿಲು.
  6. (ವ್ಯಾಧಿ, ಕೋಪ, ಭಾವ, ಮೊದಲಾದವುಗಳ) ಕೆರಳುವಿಕೆ; ಉಲ್ಬಣ; ಆವೇಗ; ಉದ್ವೇಗ; ಉದ್ರೇಕ.
ಪದಗುಚ್ಛ
  1. access and recess ಮುನ್ನಡೆ, ಹಿನ್ನಡೆ; ಸಮೀಪಗವನ, ದೂರಗಮನ.
  2. easy of access ಸರ್ವಸುಲಭವಾಗಿ; ಸುಲಭಗಮ್ಯವಾಗಿ; ಸುಲಭವಾಗಿ ಭೇಟಿಮಾಡಬಹುದಾದ, ಸಮೀಪಿಸಬಹುದಾದ.