acceptor ಆ(ಅ)ಕ್ಸೆಪಟರ್‍
ನಾಮವಾಚಕ
  1. ಪರಿಗ್ರಾಹಕ; ಹುಂಡಿಗ್ರಾಹಕ; ಹುಂಡಿಗೆ ಹಣ ಕೊಡಲು ಒಪ್ಪಿಕೊಂಡವನು.
  2. (ರಸಾಯನವಿಜ್ಞಾನ) ಆದಾತ; ಒಂದು ಪದಾರ್ಥದೊಡನೆ ಯಾ ಒಂದು ಕಣದೊಡನೆ–ಮುಖ್ಯವಾಗಿ ಒಂದು ಉಪಪರವಾಣು ಕಣದೊಡನೆ–ಸಂಯೋಗವಾಗಬಲ್ಲ ಪದಾರ್ಥ ಯಾ ಕಣ: wool is a dye acceptor ಉಣ್ಣೆಯು ವರ್ಣದ್ರವ್ಯದ ಆದಾತ. ammonia is a proton acceptor ಅಮೋನಿಯವು ಪ್ರೊಟಾನ್‍ ಆದಾತ.
  3. (ದೂರ ಸಂಪರ್ಕ) ಪರಿಗ್ರಾಹಕ; ನಿರ್ದಿಷ್ಟ ಆವರ್ತನದ ಸಂಜ್ಞೆಯನ್ನು ಗ್ರಹಿಸುವ ಸಾಮರ್ಥ್ಯವುಳ್ಳ ಮಂಡಲ.