acceptance ಅ(ಆ)ಕ್ಸೆಪ್ಟನ್ಸ್‍
ನಾಮವಾಚಕ
  1. (ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ) ಸ್ವೀಕಾರ; ಅಂಗೀಕಾರ; ಒಳ್ಳೆಯ ಅಭಿಪ್ರಾಯದಿಂದ–ತೆಗೆದುಕೊಳ್ಳುವುದು, ಒಪ್ಪುವದು.
  2. (ಕೊಡುಗೆ, ಹಣದ ಪಾವತಿ, ಕರ್ತವ್ಯ, ಆಮಂತ್ರಣ, ಮೊದಲಾದವುಗಳನ್ನು ಅಂಗೀಕರಿಸಲು) ಒಪ್ಪಿಗೆ; ಸಮ್ಮತಿ.
  3. ಹುಂಡಿಗೆ ಹಣ ಕೊಡಲು, ಸಲ್ಲಿಸಲು ಒಪ್ಪಿಗೆ.
  4. (ಹಣಕೊಡಲು, ಸಲ್ಲಿಸಲು) ಒಪ್ಪಿದ ಹುಂಡಿ; ಅಂಗೀಕರಿಸಿದ ಹುಂಡಿ.
  5. ಮೆಚ್ಚಿಕೆ; ಅನುಮೋದನೆ; ಅಂಗೀಕಾರ: the theory found wide acceptance ಆ ಸಿದ್ಧಾಂತಕ್ಕೆ ವ್ಯಾಪಕವಾದ ಅನುಮೋದನೆ ದೊರೆಯಿತು.
  6. ಸಹಿಸಿಕೊಳ್ಳುವಿಕೆ; ತಾಳಿಕೊಳ್ಳುವುದು.
  7. (ಬಹುವಚನದಲ್ಲಿ) (ಬ್ರಿಟಿಷ್‍ ಪ್ರಯೋಗ) (ಕುದುರೆ ಪಂದ್ಯದಲ್ಲಿ ಕುದುರೆಗಳ ಬಲಾಬಲಗಳನ್ನು ಸಮಗೊಳಿಸಲು ಬಲಿಷ್ಠ ಕುದುರೆಗಳ ಮೇಲೆ ಹೆಚ್ಚು ಭಾರ ಹೊರಿಸುವುದಕ್ಕಾಗಿ ಮಾಲೀಕರಿಂದ ಯಾ ಅವರ ಏಜಂಟರಿಂದ ಪಡೆದ) ಲಿಖಿತ ಒಪ್ಪಿಗೆಗಳು; ಒಪ್ಪಿಗೆ ಕರಾರುಗಳು.
ನುಡಿಗಟ್ಟು

acceptance of persons (ಗತಪ್ರಯೋಗ) ಪಕ್ಷಪಾತ.