acceptable ಅ(ಆ)ಕ್ಸೆಪ್ಟಬ್‍ಲ್‍
ಗುಣವಾಚಕ
  1. ಒಪ್ಪಬಹುದಾದ; ಒಪ್ಪತಕ್ಕ; ಗ್ರಾಹ್ಯ; ಸ್ವೀಕಾರ್ಯ; ಸ್ವೀಕಾರಯೋಗ್ಯ; ಅಂಗೀಕಾರಾರ್ಹ: no compromise could ever be acceptable ಯಾವ ರಾಜಿಯೂ ಅಂಗೀಕಾರಾರ್ಹವಲ್ಲ.
  2. ಹಿತವಾದ; ಇಷ್ಟವಾದ; ಪ್ರಿಯವಾದ; ತೃಪ್ತಿಕರವಾದ.
  3. ಸಹಿಸಬಲ್ಲ; ತೆಗೆದುಕೊಳ್ಳಬಲ್ಲ; ತಾಳಿಕೊಳ್ಳಬಲ್ಲ: acceptable risk ಸಹಿಸಿಕೊಳ್ಳಬಲ್ಲ–ನಷ್ಟ, ಅಪಾಯ.
  4. ಕೇವಲ ತೃಪ್ತಿಕರ ಎನ್ನಬಹುದಾದ; ಪರವಾಗಿಲ್ಲವೆನ್ನಬಹುದಾದ: the paintings varied from excellent to acceptable ಆ ವರ್ಣಚಿತ್ರಗಳ ವೈವಿಧ್ಯ ಅತ್ಯುತ್ತಮ ಮಟ್ಟದಿಂದ ಕೇವಲ ತೃಪ್ತಿಕರವೆಂಬಷ್ಟರವರೆಗೂ ಇತ್ತು.