accept ಅ(ಆ)ಕ್ಸೆಪ್ಟ್‍
ಸಕರ್ಮಕ ಕ್ರಿಯಾಪದ
  1. (ಅಂಗೀಕರಿಸಲು, ಸ್ವೀಕರಿಸಲು, ತೆಗೆದುಕೊಳ್ಳಲು) ಒಪ್ಪು; ಒಪ್ಪಿಕೊ; ಸಮ್ಮತಿಸು: accept an apology ಕ್ಷಮಾಪಣೆಯನ್ನು ಅಂಗೀಕರಿಸು. accepted lower wages ಕಡಮೆ ಕೂಲಿಯನ್ನು ಒಪ್ಪಿಕೊಂಡ.
  2. (ಒಪ್ಪಿಗೆಯಿಂದ) ತೆಗೆದುಕೊ; ಸ್ವೀಕರಿಸು: accept a gift ಉಡುಗೊರೆಯನ್ನು ತೆಗೆದುಕೊ.
  3. (ಆಮಂತ್ರಣವನ್ನು, ಮದುವೆಯಾಗಲು ವರನನ್ನು) ಅಂಗೀಕರಿಸು; ಸ್ವೀಕರಿಸು; ಆಗಲಿ ಎನ್ನು; ಒಪ್ಪು: when he asked her to marry him, she accepted him ತನ್ನನ್ನು ಮದುವೆಯಾಗೆಂದು ಅವನು ಕೇಳಿದಾಗ ಅವಳು ಆಗಲಿ ಎಂದಳು (ಅವನನ್ನು ಒಪ್ಪಿದಳು). please accept my invitation ದಯವಿಟ್ಟು ನನ್ನ ಆಹ್ವಾನವನ್ನು ಅಂಗೀಕರಿಸು.
  4. (ತಾಳ್ಮೆಯಿಂದ ವಿರೋಧಿಸದೆ) ಸಹಿಸಿಕೊ; ತಾಳಿಕೊ; ಒಪ್ಪಿಕೊ: accept the umpire’s decision ಅಂಪೈರ್‍ನ ತೀರ್ಮಾನಕ್ಕೆ ಬದ್ಧನಾಗು.
  5. (ಸಮರ್ಪಕವೆಂದು, ನ್ಯಾಯವಾಗಿದೆಯೆಂದು, ಸರಿಯೆಂದು) ಒಪ್ಪು; ಅಂಗೀಕರಿಸು; ಸ್ವೀಕರಿಸು: will accept your explanation ನಿನ್ನ ವಿವರಣೆಯನ್ನು ಒಪ್ಪಿಕೊಳ್ಳುತ್ತೇನೆ. slot machine accepts only coins ಸ್ಲಾಟ್‍ ಯಂತ್ರವು ನಾಣ್ಯಗಳನ್ನು ಮಾತ್ರ ಸ್ವೀಕರಿಸುತ್ತದೆ. accept service of writ ಕೋರ್ಟಿನ ಖಟ್ಲೆಯನ್ನು ನ್ಯಾಯವೆಂದು ಅಂಗೀಕರಿಸು.
  6. ನಿಜವೆಂದು ಒಪ್ಪಿಕೊ; ಸತ್ಯವೆಂದು–ಗ್ರಹಿಸು, ಅಂಗೀಕರಿಸು, ನಂಬು: accepted opinion ಅಂಗೀಕೃತಾಭಿಪ್ರಾಯ; ಸರ್ವಸಮ್ಮತಾಭಿಪ್ರಾಯ; ಸಾರ್ವತ್ರಿಕಾಭಿಪ್ರಾಯ; ಸರಿಯೆಂದು ಎಲ್ಲರೂ ಭಾವಿಸಿರುವ ಅಭಿಪ್ರಾಯ.
  7. (ಹುದ್ದೆಯನ್ನು, ಅಧಿಕಾರವನ್ನು) ಅಂಗೀಕರಿಸು; ವಹಿಸಿಕೊ; ಒಪ್ಪಿಕೊ.
  8. ಹೊಣೆ ಹೊತ್ತುಕೊ; ಜವಾಬ್ದಾರಿ ವಹಿಸಿಕೊ; ಒಪ್ಪಿಕೊ : accept bill of exchange ಹುಂಡಿಯನ್ನು ಒಪ್ಪಿಕೊ; ಹುಂಡಿಯ ಹಣವನ್ನು ತೆರುವ ಹೊಣೆ ಹೊತ್ತುಕೊ.
  9. (ಪದ, ವಾಕ್ಯ, ಹೇಳಿಕೆ, ಸಂದರ್ಭ, ಮೊದಲಾದವುಗಳ ವಿಷಯದಲ್ಲಿ ಅವುಗಳ) ಅರ್ಥ ಗ್ರಹಿಸು; ಸೂಚನೆಯನ್ನು ಅರ್ಥ ಮಾಡಿಕೊ.
  10. (ಮುಖ್ಯವಾಗಿ ಸಾಕಿದ ಹೆಣ್ಣು ಪ್ರಾಣಿಯ ವಿಷಯದಲ್ಲಿ) ಕೂಡಗೊಡು; ಮೈಥುನಕ್ಕೆ ಆಸ್ಪದ ಕೊಡು.
ಅಕರ್ಮಕ ಕ್ರಿಯಾಪದ
  1. ಒಪ್ಪಿಕೊ; ಸಮ್ಮತಿಸು.
  2. ಅಂಗೀಕರಿಸು; ತೆಗೆದುಕೊ.