accede ಆ(ಅ)ಕ್ಸೀಡ್‍
ಅಕರ್ಮಕ ಕ್ರಿಯಾಪದ
  1. ಅಧಿಕಾರಕ್ಕೆ ಬರು; ಅಧಿಕಾರ ವಹಿಸಿಕೊ: he acceded to the governorship ಆತನು ಗವರ್ನರ್‍ ಪದವಿ ವಹಿಸಿಕೊಂಡನು. acceded to the throne ಸಿಂಹಾಸನಕ್ಕೆ ಬಂದ; ಸಿಂಹಾಸನವನ್ನು ಏರಿದ.
  2. ರಾಜನಾಗು; ದೊರೆಯಾಗು: the king acceded in 1918 ಅವನು 1918ರಲ್ಲಿ ರಾಜನಾದ.
  3. (ಒಂದು ಪಕ್ಷಕ್ಕೆ) ಸೇರು; ಸೇರಿಕೊ.
  4. (ಅಭಿಪ್ರಾಯ, ನೀತಿ, ಮೊದಲಾದವನ್ನು) ಒಪ್ಪು; ಒಪ್ಪಿಕೊ; ಅಂಗೀಕರಿಸು: he acceded to my request ಅವನು ನನ್ನ ಕೋರಿಕೆಗೆ ಒಪ್ಪಿದನು.
  5. (ನ್ಯಾಯಶಾಸ್ತ್ರ) (ಒಂದು ಜನಾಂಗ ಯಾ ಭೂಭಾಗವು ರಾಜಕೀಯವಾಗಿ) ಸೇರಿಕೊಳ್ಳು: Kashmir acceded to India ಕಾಶ್ಮೀರವು ಭಾರತಕ್ಕೆ ಸೇರಿಕೊಂಡಿತು.
  6. (ವಿಧ್ಯುಕ್ತವಾಗಿ ಕೌಲು, ಕರಾರು, ಒಪ್ಪಂದ, ಮೊದಲಾದವಕ್ಕೆ) ಒಪ್ಪಿಗೆ ಕೊಡು; ಸಮ್ಮತಿಸು.