See also 2academic
1academic ಆಕಡೆಮಿಕ್‍
ಗುಣವಾಚಕ
  1. ಪ್ಲೇಟೋವಿನ ತಾತ್ತ್ವಿಕ ಪಂಥಕ್ಕೆ ಸೇರಿದ.
  2. ಸಂದೇಹ ದೃಷ್ಟಿಯ; ಸಂಶಯದೃಷ್ಟಿಯಿಂದ ಕೂಡಿದ.
  3. ವಿದ್ವತ್ಪೂರ್ಣ; ಪಾಂಡಿತ್ಯವುಳ್ಳ; ಪ್ರೌಢ.
  4. ಶೈಕ್ಷಣಿಕ; ವ್ಯಾಸಂಗಕ್ಕೆ, ಅಧ್ಯಯನಕ್ಕೆ–ಸಂಬಂಧಿಸಿದ.
  5. ಅವ್ಯಾವಹಾರಿಕ; ಕ್ರಿಯಾತ್ಮಕವಲ್ಲದ; ಕಾರ್ಯಕಾರಿಯಲ್ಲದ; (ಕೇವಲ ಪಾಂಡಿತ್ಯದ ಫಲವಾಗಿ) ಕಾರ್ಯಕ್ಕೆ ಒದಗದ: an academic discussion ಅವ್ಯಾವಹಾರಿಕ ಯಾ ನಿಷ್ಫಲ ಚರ್ಚೆ.
  6. ಒಣ ತರ್ಕದ; ಶುಷ್ಕತರ್ಕದ.
  7. ಒಣ ವಿದ್ವತ್ತಿನ; ಶುಷ್ಕಪಾಂಡಿತ್ಯದ.
  8. ವಿಶ್ವವಿದ್ಯಾನಿಲಯ, ಕಾಲೇಜು, ಮೊದಲಾದವಕ್ಕೆ ಸಂಬಂಧಿಸಿದ: academic costume = academicals.
  9. (ಕಲೆ) ಸಾಂಪ್ರದಾಯಿಕ; ಸಂಪ್ರದಾಯಶರಣ; ರೂಢಿಯಲ್ಲಿರುವ ಸಂಪ್ರದಾಯ, ಸಂಸ್ಥೆ, ಮೊದಲಾದವುಗಳ ತತ್ತ್ವ, ಸೂತ್ರಗಳಿಗೆ ಕಟ್ಟುಬಿದ್ದಿರುವ.
  10. (ಅಮೆರಿಕನ್‍ ಪ್ರಯೋಗ) ತಾಂತ್ರಿಕವಲ್ಲದ ಯಾ ಆನ್ವಯಿಕವಲ್ಲದ (ಉದಾಹರಣೆಗೆ ಶುದ್ಧ ಗಣಿತ, ಸಾಹಿತ್ಯ, ಪ್ರಾಚೀನ ಭಾಷೆಗಳು) ವಿಷಯಗಳ ಅಧ್ಯಯನಕ್ಕೆ ಸಂಬಂಧಿಸಿದ: academic subjects ತಾಂತ್ರಿಕವಲ್ಲದ ಯಾ ಆನ್ವಯಿಕವಲ್ಲದ ಪಠ್ಯ ವಿಷಯಗಳು.
See also 1academic
2academic ಆಕಡೆಮಿಕ್‍
ನಾಮವಾಚಕ
  1. ಪ್ರಾಚೀನ ಪ್ಲೇಟೋಪಂಥಿ; ಪ್ಲೇಟೋ ಮತಾನುಯಾಯಿಗಳಲ್ಲಿ ಪ್ರಾಚೀನ ಸಂಪ್ರದಾಯದವನು.
  2. ಕಾಲೇಜು ಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯಾ ಅಧ್ಯಾಪಕ.