abut ಅಬಟ್‍
ಕ್ರಿಯಾವಿಶೇಷಣ
(ಭೂತರೂಪ ಮತ್ತು ಭೂತಕೃದಂತ abutted, ವರ್ತಮಾನ ಕೃದಂತ abutting)
ಸಕರ್ಮಕ ಕ್ರಿಯಾಪದ
  1. ತಗುಲಿಕೊಂಡಿರು; ಅಂಟಿಕೊಂಡಿರು: two plots that abut each other ಒಂದಕ್ಕೊಂದು ತಗುಲಿಕೊಂಡಿರುವ ಎರಡು ನಿವೇಶನಗಳು.
  2. ಒರಗಿಸು; ಆನಿಸು; ಒರಗಿರುವಂತೆ ಮಾಡು: abut timber against a post ಮರವನ್ನು ಕಂಬಕ್ಕೆ ಒರಗಿಸು.
ಅಕರ್ಮಕ ಕ್ರಿಯಾಪದ
  1. (ಇನ್ನೊಂದರ ಎಲ್ಲೆಗೆ) ತಾಗಿರು; ತಗುಲಿಕೊಂಡಿರು; ಸೇರಿಕೊಂಡಿರು; ಹೊಂದಿಕೊಂಡಿರು; ಎಲ್ಲೆಗೂಡಿರು: his land abuts on the road ಅವನ ಜಮೀನು ರಸ್ತೆಗೆ ತಗುಲಿಕೊಂಡಿದೆ.
  2. (ಕಟ್ಟಡ ಮೊದಲಾದವುಗಳು) ಒರಗಿರು; ಆನಿಕೊಂಡಿರು.