See also 2abuse
1abuse ಅಬ್ಯೂಸ್‍
ಸಕರ್ಮಕ ಕ್ರಿಯಾಪದ
  1. ದುರುಪಯೋಗಪಡಿಸು; ದುರುಪಯೋಗ ಮಾಡು; ದುರುಪಯೋಗಪಡಿಸಿಕೊ: abuse one’s authority ಅಧಿಕಾರವನ್ನು ದುರುಪಯೋಗಪಡಿಸಿಕೊ.
  2. (ಪ್ರಾಚೀನ ಪ್ರಯೋಗ) (ಈಗ ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ ಮಾತ್ರ) ಮೋಸಗೊಳಿಸು; ವಂಚಿಸು: I did not know that I had been abused ನಾನು ವಂಚಿತನಾದೆನೆಂದು ನನಗೆ ತಿಳಿಯಲಿಲ್ಲ.
  3. (ಕೆಟ್ಟದಾಗಿ, ಅಪಶಬ್ದದಿಂದ) ಬಯ್ಯು; ತೆಗಳು; ದೂಷಿಸು; ನಿಂದಿಸು.
  4. ನೋಯಿಸು; ನೋವುಂಟುಮಾಡು; ನೋವಾಗುವಂತೆ, ಹಾನಿಯಾಗುವಂತೆ–ವರ್ತಿಸು: to abuse a horse by overworking ಮಿತಿಮೀರಿ ದುಡಿಸಿ ಕುದುರೆಗೆ ನೋವಾಗುವಂತೆ ಮಾಡು. abuse one’s eye sight by reading in dim light ಮಂದ ಬೆಳಕಿನಲ್ಲಿ ಓದುವುದರ ಮೂಲಕ ದೃಷ್ಟಿಗೆ ಹಾನಿಮಾಡಿಕೊ.
ಪದಗುಚ್ಛ

abuse oneself ಮುಷ್ಟಿಮೈಥುನ ಮಾಡಿಕೊ.

See also 1abuse
2abuse ಅಬ್ಯೂಸ್‍
ನಾಮವಾಚಕ
  1. ದುರುಪಯೋಗ: an abuse of authority ಅಧಿಕಾರದ ದುರುಪಯೋಗ.
  2. ಅನ್ಯಾಯ; ಕೆಟ್ಟ ಪದ್ಧತಿ; ದುರಾಚಾರ: the buying of votes and other abuses ಓಟುಗಳನ್ನು ಕೊಳ್ಳುವುದು ಮೊದಲಾದ (ಚುನಾವಣೆಯ) ದುರಾಚಾರಗಳು.
  3. ಬೈಗುಳು; ದೂಷಣೆ; ನಿಂದೆ.
  4. ಅಪಪ್ರಯೋಗ: to call it a democracy is an abuse of the term ಅದನ್ನು ಪ್ರಜಾಪ್ರಭುತ್ವವೆಂದು ಕರೆಯುವುದು ಆ ಶಬ್ದದ ಅಪಪ್ರಯೋಗ.