See also 2abstract  3abstract
1abstract ಆಬ್ಸ್‍ಟ್ರಾಕ್ಟ್‍
ಗುಣವಾಚಕ
  1. ಅಮೂರ್ತ; ಚಿತ್ತಗ್ರಾಹ್ಯ; ಭಾವನಾ ಗೋಚರವಾದ; ಇಂದ್ರಿಯಗಳಿಗೆ ಅಗೋಚರವಾದ; ಭೌತದ್ರವ್ಯ, ಭೌತರೂಪ, ವ್ಯವಹಾರ ಯಾ ನಿರ್ದಿಷ್ಟ ದೃಷ್ಟಾಂತಗಳಿಂದ ಭಿನ್ನವಾದ ಯಾ ಬೇರ್ಪಡಿಸಿದ: a flower is beautiful, but beauty itself is abstract ಹೂವು ಸುಂದರವಾಗಿದೆ, ಆದರೆ ಸೌಂದರ್ಯ ಎಂಬುದು ಅಮೂರ್ತ. an abstract idea ಒಂದು ಅಮೂರ್ತ ಕಲ್ಪನೆ.
  2. ಕೇವಲ ಭಾವನಾತ್ಮಕವಾದ; ಸೈದ್ಧಾಂತಿಕ; ಪ್ರಾಯೋಗಿಕವಲ್ಲದ; ವ್ಯಾವಹಾರಿಕವಲ್ಲದ.
  3. ದುರ್ಬೋಧ: ದುರವಗಾಹ್ಯ; ದುಜ್ಞೇಯ; ಅರಿಯಲು ಕಷ್ಟವಾದ.
  4. (ಕಲೆ ಮೊದಲಾದವುಗಳ ವಿಷಯದಲ್ಲಿ) ಅಮೂರ್ತ; ಅನುಕರಿಸದ; ವಸ್ತುಗಳ ರೂಪ, ಗುಣ, ಆಕೃತಿ, ಮೊದಲಾದವುಗಳನ್ನು ಅನುಕರಿಸದ, ಪ್ರತಿಬಿಂಬಿಸದ.
ಪದಗುಚ್ಛ
  1. in the abstract ಭಾವನೆಯಾಗಿ; ತತ್ತ್ವ ಸ್ವರೂಪದಲ್ಲಿ: she has no idea of poverty but in the abstract ಕೇವಲ ಭಾವನೆಯ ರೂಪದಲ್ಲಲ್ಲದೆ ಬಡತನದ ವಿಷಯ ಅವಳಿಗೆ ಏನೂ ತಿಳಿಯದು.
  2. the abstract ಕೇವಲ ಭಾವನೆಯ ರೂಪದಲ್ಲಿರುವುದು.
See also 1abstract  3abstract
2abstract ಆಬ್ಸ್‍ಟ್ರಾಕ್ಟ್‍
ನಾಮವಾಚಕ
  1. (ಪುಸ್ತಕ ಮೊದಲಾದವುಗಳಲ್ಲಿಯ ವಿಷಯಗಳ) ತಿರುಳು; ಸಾರಾಂಶ; ಸಂಗ್ರಹ; ಗೋಷ್ವಾರೆ: make an abstract of it ಅದನ್ನು ಸಂಗ್ರಹ ಮಾಡು, ಸಂಗ್ರಹಿಸು.
  2. ಭಾವ(ನಾ)ವಾಚಿ; ಭಾವವನ್ನು, ತತ್ತ್ವವನ್ನು ನಿರೂಪಿಸುವ ಪದ.
See also 1abstract  2abstract
3abstract ಆಬ್ಸ್‍ಟ್ರಾಕ್ಟ್‍
ಸಕರ್ಮಕ ಕ್ರಿಯಾಪದ
  1. ಬೇರ್ಪಡಿಸು; ತೆಗೆ; ಪ್ರತ್ಯೇಕಿಸು; ಅಪಕರ್ಷಿಸು: abstract metal from ore ಅದಿರಿನಿಂದ ಲೋಹವನ್ನು–ಬೇರ್ಪಡಿಸು, ತೆಗೆ.
  2. (ಸೌಮ್ಯೋಕ್ತಿ) ಕದಿ; ಅಪಹರಿಸು: abstracted a purse frome his pocket ಅವನ ಜೇಬಿನಿಂದ ಹಣದ ಚೀಲವನ್ನು ಕದ್ದನು.
  3. ಅನ್ಯಮನಸ್ಕನಾಗಿಸು; ಗಮನವನ್ನು ಬೇರೆಡೆಗೆ ಸೆಳೆ; ಮನಸ್ಸನ್ನು ಎಲ್ಲಿಗೋ ಒಯ್ಯು: day-dreaming abstracted him ಹಗಲುಗನಸು ಅವನ ಮನಸ್ಸನ್ನು ಎಲ್ಲಿಗೋ ಒಯ್ದಿತು.
  4. ಭಾವರೂಪದಲ್ಲಿ ಗ್ರಹಿಸು; ಮೂರ್ತವಸ್ತುಗಳಿಂದ ಪ್ರತ್ಯೇಕವಾಗಿ ಭಾವಿಸು; ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳನ್ನು ಭಾವನೆಯ ರೂಪದಲ್ಲಿ ವಸ್ತುಗಳಿಂದ ಪ್ರತ್ಯೇಕಿಸಿ ಗ್ರಹಿಸು: we abstract greenness from green things ಹಸುರು ವಸ್ತುಗಳಿಂದ ಹಸುರನ್ನು ಪ್ರತ್ಯೇಕಿಸಿ ಗ್ರಹಿಸುತ್ತೇವೆ.
  5. ಸಂಕ್ಷೇಪಿಸು; ಸಂಗ್ರಹಿಸು.