absorb ಅಬ್ಸಾ(ಬಾ’)ರ್ಬ್‍
ಸಕರ್ಮಕ ಕ್ರಿಯಾಪದ
  1. (ದ್ರವ ಮೊದಲಾದವನ್ನು) ಹೀರು; ಹೀರಿಕೊ; ಕುಡಿ.
  2. ಕಬಳಿಸು; ಒಳಗೊಳ್ಳು; ಲೀನವಾಗಿಸು.
  3. (ಆಹಾರ, ಜ್ಞಾನ, ಮೊದಲಾದವನ್ನು) ಒಳಕ್ಕೆ ತೆಗೆದುಕೊ; ಒಳಕ್ಕೆಳೆದುಕೊ.
  4. (ಗಮನವನ್ನು) ಪೂರ್ತಿ-ಮಗ್ನವಾಗಿಸು, ಮಗ್ನಗೊಳಿಸು.
  5. ಅರಗಿಸಿಕೊ; ಮೈಗೂಡಿಸಿಕೊ; ಐಕ್ಯಮಾಡಿಕೊ; ಅಂತರ್ಗತ ಮಾಡಿಕೊ: capacity of Hinduism to absorb new ideas ಹೊಸ ಭಾವನೆಗಳನ್ನು ಮೈಗೂಡಿಸಿಕೊಳ್ಳಲು ಹಿಂದೂ ಧರ್ಮಕ್ಕಿರುವ ಸಾಮರ್ಥ್ಯ.
  6. (ಶಾಖ, ಬೆಳಕು, ಶಬ್ದ, ಒತ್ತಡ, ಮೊದಲಾದವನ್ನು) ಹೀರು; ಹೀರಿಕೊ; ಭೌತಿಕ ಯಾ ರಾಸಾಯನಿಕ ಕ್ರಿಯೆಯ ಮೂಲಕ (ಶಾಖ, ಬೆಳಕು, ಮೊದಲಾದವುಗಳ) ತೀವ್ರತೆಯನ್ನು ತಗ್ಗಿಸು, ಕಡಮೆಮಾಡು.
  7. (ಆದಾಯ, ಶ್ರಮ, ಬಲ, ಮೊದಲಾದವನ್ನು) ತಿಂದುಹಾಕು; ತೆಗೆದುಕೊಂಡು ಬಿಡು; ಮುಗಿಸಿಬಿಡು; ಉಪಯೋಗಿಸಿಬಿಡು: my job absorbs all my time ನನ್ನ ಕೆಲಸ ನನ್ನ ಕಾಲವನ್ನೆಲ್ಲ ತೆಗೆದುಕೊಂಡು ಬಿಡುತ್ತದೆ.
ಪದಗುಚ್ಛ
  1. be absorbed by (ಒಂದರಲ್ಲಿ) ಮುಳುಗಿ ಹೋಗು; ಮೈಮರೆ; ಮಗ್ನವಾಗು; ತಲ್ಲೀನವಾಗು.
  2. be absorbed in = ಪದಗುಚ್ಛ\((1)\).