See also 2absolutely
1absolutely ಆಬ್ಸಲೂ(ಲ್ಯೂ)ಟ್ಲಿ
ಕ್ರಿಯಾವಿಶೇಷಣ
  1. ತನಗೆ ತಾನೆ; ಸ್ವತಃ; ಸ್ವತಂತ್ರವಾಗಿ; ಪ್ರತ್ಯೇಕವಾಗಿ.
  2. ನಿರಂಕುಶವಾಗಿ; ಬಾಹ್ಯನಿಯಂತ್ರಣವಿಲ್ಲದೆ.
  3. (ವ್ಯಾಕರಣ) ಅನನ್ವಿತವಾಗಿ; ಕರ್ಮಪದವನ್ನು ಬಳಸದೆ: transitive verb used absolutely ಅನನ್ವಿತವಾಗಿ ಯಾ ಕರ್ಮಪದ ಹೇಳದೆ ಬಳಸಿದ ಸಕರ್ಮಕ ಕ್ರಿಯಾಪದ.
  4. ನಿರುಪಾಧಿಕವಾಗಿ. ಉ೫ ನಿರಪೇಕ್ಷವಾಗಿ.
  5. ನಿಜವಾಗಿ; ಖಂಡಿತವಾಗಿ; ವಾಸ್ತವವಾಗಿ; ನಿಶ್ಚಯವಾಗಿ: it absolutely exploded ಅದು ನಿಜವಾಗಿ ಸಿಡಿಯಿತು.
  6. ಪೂರ್ತಿ; ಶುದ್ಧಾಂಗವಾಗಿ; ಪೂರ್ಣವಾಗಿ; ಸಂಪೂರ್ಣವಾಗಿ: absolutely wrong ಪೂರ್ತಿ ತಪ್ಪು.
  7. (ನಿಷೇಧಾರ್ಥಕಗಳೊಡನೆ) ಸ್ವಲ್ಪವೂ; ಇನಿತೂ; ಏನೂ; ಕಿಂಚಿತ್ತೂ: had absolutely no claim to it ಅದಕ್ಕೆ ಸ್ವಲ್ಪವೂ ಹಕ್ಕಿಲ್ಲ. could do absolutely nothing ಏನೂ ಮಾಡಲಾಗಲಿಲ್ಲ.
See also 1absolutely
2absolutely ಆಬ್ಸಲೂ(ಲ್ಯೂ)ಟ್ಲಿ
ಭಾವಸೂಚಕ ಅವ್ಯಯ
  1. ಹೌದು; ನಿಜ; ಖಂಡಿತವಾಗಿ.
  2. ಅಂತೆಯೇ; ಹಾಗೆಯೇ.