absolute ಆಬ್ಸಲೂ(ಲ್ಯೂ)ಟ್‍
ಗುಣವಾಚಕ
  1. ಸಂಪೂರ್ಣ; ಸಮಗ್ರ; ಪರಿಪೂರ್ಣ; ದೋಷರಹಿತ: tell the absolute truth ಸಂಪೂರ್ಣ ಸತ್ಯವನ್ನು ಹೇಳು.
  2. ತಾಜಾ; ಅಪ್ಪಟ; ಕೇವಲ; ಬರಿ; ಶುದ್ಧ; ಬೆರಕೆಯಿಲ್ಲದ; absolute alcohol ಅಪ್ಪಟ ಯಾ ಶುದ್ಧ ಆಲ್ಕಹಾಲ್‍; ನೀರು ಮೊದಲಾದವನ್ನು ಬೆರಸದ ಆಲ್ಕಹಾಲ್‍.
  3. ಅಬಾಧಿತ; ನಿರ್ಭಂಧರಹಿತ: absolute ownership ಅಬಾಧಿತ ಸ್ವಾಮ್ಯ.
  4. ಅಂಕೆಯಿಲ್ಲದ; ನಿರಂಕುಶ; ಸರ್ವತಂತ್ರ ಸ್ವತಂತ್ರ; ಸ್ವೇಚ್ಛಾನುಸಾರಿ: absolure monarchy ನಿರಂಕುಶ ಪ್ರಭುತ್ವ. God’s absolute power ದೇವರ ಸರ್ವತಂತ್ರ ಸ್ವತಂತ್ರಾಧಿಕಾರ.
  5. (ವ್ಯಾಕರಣ) ಅನನ್ವಿತ; ಸ್ವತಂತ್ರ; ವಾಕ್ಯದ ಕ್ರಿಯೆಯಿಂದ ಬದ್ಧವಾಗಿಲ್ಲದ.
  6. ನಿರಪೇಕ್ಷ; ಸಾಪೇಕ್ಷವಲ್ಲದ; ಸಜಾತೀಯವಾದ ಇತರ ವಸ್ತುಗಳೊಡನೆ ಹೋಲಿಸದೆ ಸ್ವತಃ ವಸ್ತುಭೂತವಾಗಿರುವ: absolute scale of temperature ನಿರಪೇಕ್ಷ ತಾಪಮಾನ.
  7. ನಿರುಪಾಧಿಕ; ಉಪಾಧಿರಹಿತ: an absolute proposition ನಿರುಪಾಧಿಕ ಯಾ ಅನವಚ್ಛಿನ್ನ ಪ್ರತಿಜ್ಞೆ.
  8. (ತತ್ತ್ವಶಾಸ್ತ್ರ) ಸ್ವತಂತ್ರಸತ್ತೆಯ; ಸ್ವಯಂಭು; ಸ್ವಯಂಪೂರ್ಣ; ಪರಮ; ತನ್ನದೇ ಅಸ್ತಿತ್ವವನ್ನು ಹೊಂದಿದ್ದು, ಅದನ್ನು ಅರಿಯಲು ಇತರ ವಸ್ತುಗಳೊಡನೆ ಹೋಲಿಕೆ ಯಾ ಸಂಬಂಧ ಬೇಕಿಲ್ಲದ: absolute value ಸ್ವತಂತ್ರಮೌಲ್ಯ. absolute knowledge ಪರಮಜ್ಞಾನ.
  9. ನಿಜವಾದ; ವಾಸ್ತವಿಕವಾದ; ಸತ್ಯವಾದ; ನಿಸ್ಸಂದಿಗ್ಧವಾದ: an absolute fact ನಿಜವಾದ ಸಂಗತಿ. absolute proof ನಿಸ್ಸಂದಿಗ್ಧವಾದ ಪ್ರಮಾಣ.
ಪದಗುಚ್ಛ
  1. ablative absolute (ಲ್ಯಾಟಿನ್‍ ಭಾಷೆಯಲ್ಲಿ) ಸ್ವತಂತ್ರ ಪಂಚಮೀ ವಿಭಕ್ತಿ.
  2. accusative absolute (ಜರ್ಮನ್‍ ಭಾಷೆಯಲ್ಲಿ) ಸ್ವತಂತ್ರ ದ್ವಿತೀಯಾ ವಿಭಕ್ತಿ.
  3. genitive absolute (ಗ್ರೀಕ್‍ ಭಾಷೆಯಲ್ಲಿ) ಸ್ವತಂತ್ರ ಷಷ್ಠೀ ವಿಭಕ್ತಿ.
  4. nominative absolute = absolute construction.
  5. the absolute ಪರತತ್ತ್ವ; ಬ್ರಹ್ಮ; ಪರಿಪೂರ್ಣವಾದ, ನಿರುಪಾಧಿಕವಾದ, ಸ್ವಯಂ ಸತ್ತಾತ್ಮಕವಾದ–ವಸ್ತು, ತತ್ತ್ವ.