abrupt ಅಬ್ರಪ್ಟ್‍
ಗುಣವಾಚಕ
  1. ಥಟ್ಟನೆಯ; ಹಠಾತ್ತಾದ; ಏಕಾಏಕಿಯಾದ; ಸಹಸಾ ಆದ.
  2. (ಮಾತು, ಬರಹಗಳ ವಿಷಯದಲ್ಲಿ) ಹೊಂದಾವಣೆಯಿಲ್ಲದ; ಅಸಂಬದ್ಧ; ಅಸಂಗತ; ಪರಸ್ಪರ ಸಂಬಂಧವಿಲ್ಲದ: abrupt manner of speaking ಪರಸ್ಪರ ಸಂಬಂಧವಿಲ್ಲದ ಮಾತಿನ ರೀತಿ. abrupt style ಹೊಂದಾವಣೆಯಿಲ್ಲದ, ಅಸಂಗತ–ಶೈಲಿ, ರೀತಿ.
  3. (ನಡವಳಿಕೆ, ವ್ಯವಹಾರಗಳ ವಿಷಯದಲ್ಲಿ) ಒರಟಾದ; ನಯವಿಲ್ಲದ; ಮರ್ಯಾದೆಯಿಲ್ಲದ: a man with an abrupt manner ಒರಟು ನಡತೆಯ ಮನುಷ್ಯ.
  4. ಕಡಿದಾದ: an abrupt peak rising from the ocean ಸಾಗರದಿಂದ ಎದ್ದ ಕಡಿದಾದ ಶಿಖರ.
  5. (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ ವಿಷಯದಲ್ಲಿ) ತಲೆ ಕಡಿದ; ಛಿನ್ನಾಗ್ರ; ತುದಿ ಕತ್ತರಿಸಿದಂತಿರುವ. Figure: abrut
  6. (ಭೂವಿಜ್ಞಾನ) (ಒಳ ಸ್ತರ ಮೊದಲಾದವುಗಳ ವಿಷಯದಲ್ಲಿ) ಹಠಾತ್ತನೆ ಹೊರಗೆ–ಎದ್ದ, ಕಾಣಿಸಿಕೊಂಡ, ಪ್ರಕಟವಾದ.