See also 2abroad
1abroad ಅಬ್ರಾಡ್‍
ಕ್ರಿಯಾವಿಶೇಷಣ
  1. ವಿದೇಶದಲ್ಲಿ; ಹೊರದೇಶದಲ್ಲಿ; ವಿದೇಶಕ್ಕೆ; ಹೊರದೇಶಕ್ಕೆ: go abroad ವಿದೇಶಕ್ಕೆ ಹೋಗು.
  2. (ಸರಿಯಾದುದನ್ನು ಬಿಟ್ಟು) ದಾರಿತಪ್ಪಿ; ಗುರಿತಪ್ಪಿ: all abroad ಎಲ್ಲರೂ ದಾರಿತಪ್ಪಿದವರೇ.
  3. (ಪ್ರಾಚೀನ ಪ್ರಯೋಗ) ಮನೆಯಾಚೆ; ಮನೆಯಿಂದ ಹೊರಗೆ: you were abroad early this morning ನೀವು ಇವತ್ತು ಬೆಳಿಗ್ಗೆ ಮುಂಚೆಯೇ ಮನೆಯಿಂದ ಹೊರಗೆ ಹೋಗಿದ್ದಿರಿ.
  4. ಎಲ್ಲ ಕಡೆಗೂ; ವಿಸ್ತಾರವಾಗಿ; ವ್ಯಾಪಕವಾಗಿ; ವಿಶಾಲವಾಗಿ: scattered abroad ಎಲ್ಲ ಕಡೆಯಲ್ಲೂ ಹಂಚಿಹೋಗಿ.
  5. ಹಬ್ಬುತ್ತಾ; ಹರಡುತ್ತಾ; ವ್ಯಾಪಿಸುತ್ತಾ; ಪ್ರಚಲಿತವಾಗಿ: there is a rumour abroad ಒಂದು ವದಂತಿ ಹರಡುತ್ತದೆ.
See also 1abroad
2abroad ಅಬ್ರಾಡ್‍
ನಾಮವಾಚಕ

ವಿದೇಶ(ಗಳು); ಹೊರದೇಶ(ಗಳು): from abroad ವಿದೇಶದಿಂದ; ಇನ್ನೊಂದು ದೇಶದಿಂದ.