See also 2above  3above  4above
1above ಅಬವ್‍
ಕ್ರಿಯಾವಿಶೇಷಣ
  1. ಮೇಲೆ; ಮೇಲಕ್ಕೆ; ಮೇಲುಗಡೆ.
  2. ತಲೆಯ ಮೇಲುಗಡೆ; ಆಕಾಶದಲ್ಲಿ; ಎತ್ತರದಲ್ಲಿ: a flock of birds circled above ಹಕ್ಕಿಗಳ ಗುಂಪು ಆಕಾಶದಲ್ಲಿ ಸುತ್ತುತ್ತಿತ್ತು. seen from above ಎತ್ತರದಿಂದ ನೋಡಿದಾಗ.
  3. ಹೊಳೆಯ–ಮೇಲುಗಡೆಗೆ, ಮೇಲ್ಭಾಗದಲ್ಲಿ.
  4. ಮಹಡಿಯಲ್ಲಿ; ಉಪ್ಪರಿಗೆಯಲ್ಲಿ: my room is just above ನನ್ನ ಕೋಣೆ ಮಹಡಿಯಲ್ಲಿದೆ.
  5. ಮೇಲ್ಭಾಗದಲ್ಲಿ.
  6. (ಪುಸ್ತಕ, ಲೇಖನ, ಮೊದಲಾದವುಗಳಲ್ಲಿ) ಹಿಂದೆ; ಮೊದಲಲ್ಲಿ; ಮೇಲೆ: as was remarked above ಹಿಂದೆ ಹೇಳಿದಂತೆ. the above-cited passages ಮೇಲೆ ಹೇಳಿದ ಭಾಗಗಳು. the above-mentioned facts ಮೊದಲಲ್ಲಿ ತಿಳಿಸಿದ ಸಂಗತಿಗಳು.
  7. ಸ್ವರ್ಗದಲ್ಲಿ; ದೇವಲೋಕದಲ್ಲಿ: the Powers above ಸ್ವರ್ಗದ ಶಕ್ತಿಗಳು; ದೇವತೆಗಳು; ದೇವಲೋಕದವರು. to eternal rest above ಸ್ವರ್ಗದಲ್ಲಿ ಶಾಶ್ವತ ವಿಶ್ರಾಂತಿಗೆ.
  8. ಜೊತೆಗೆ; ಕೂಡ; ಸಹ; ಇನ್ನೂ: over and above ಇದರ ಜೊತೆಗೆ; ಅಷ್ಟೇ ಅಲ್ಲದೆ; ಇದಕ್ಕೂ ಮೀರಿ.
  9. (ದರ್ಜೆ, ಅಧಿಕಾರ, ಮೊದಲಾದವುಗಳಲ್ಲಿ) ಮೇಲೆ; ಉನ್ನತವಾಗಿ: appeal to the courts above ಮೇಲಿನ ಕೋರ್ಟ್‍ಗಳಿಗೆ ಮನವಿ ಮಾಡು.
  10. (ಸಂಖ್ಯೆಯಲ್ಲಿ) ಹೆಚ್ಚಾಗಿ; ಮೀರಿ; ಅಧಿಕವಾಗಿ: books with 100 pages and above ನೂರು ಮತ್ತು ಅದಕ್ಕೂ ಹೆಚ್ಚಿನ ಪುಟಗಳ ಪುಸ್ತಕಗಳು.
See also 1above  3above  4above
2above ಅಬವ್‍
ಉಪಸರ್ಗ
  1. ಮೇಲೆ; ಮೇಲಕ್ಕೆ; ಮೇಲುಗಡೆ; ಮೀರಿ: fly above the horizon ದಿಗಂತದ ಮೇಲೆ. above average ಸಾಮಾನ್ಯ ಮಟ್ಟಕ್ಕಿಂತ ಮೇಲೆ. above par = above average. heard above the din ಗದ್ದಲವನ್ನು ಮೀರಿ ಕೇಳಿ ಬಂದ. head above water (ರೂಪಕವಾಗಿ) ಸಾಲದಿಂದ ಮೇಲೆ; ಸಾಲವಿಲ್ಲದೆ; ಸಾಲಕ್ಕೊಳಗಾಗದೆ.
  2. -ಕ್ಕಿಂತ ಹೆಚ್ಚಾಗಿ, ಜಾಸ್ತಿಯಾಗಿ, ಅಧಿಕವಾಗಿ: above a hundred ನೂರಕ್ಕಿಂತ ಹೆಚ್ಚಾಗಿ.
  3. (ನದಿಯ) ಮೇಲುಗಡೆ; ಮೇಲುಪಾತ್ರದಲ್ಲಿ.
  4. (ಒಂದಕ್ಕಿಂತ) ಇನ್ನೂ ಉತ್ತರಕ್ಕೆ; ಉತ್ತರ ದಿಕ್ಕಿನಲ್ಲಿ: six miles above Mysore ಮೈಸೂರಿಗೆ ಆರು ಮೈಲಿ ಉತ್ತರದಲ್ಲಿ.
  5. (ಪ್ರಾಚೀನ ಪ್ರಯೋಗ) ಇನ್ನೂ ಪೂರ್ವದ; ಇನ್ನೂ–ಮುಂಚಿನ, ಹಿಂದಿನ; ಮೊದಲ ಕಾಲದ: not traced above the third contury ಮೂರನೆಯ ಶತಮಾನಕ್ಕೆ ಪೂರ್ವದಲ್ಲಿ ಗುರುತಿಸಲಾಗದ.
  6. ಎಟುಕದ; ಒಳಗಾಗದ; ದೂರವಾದ; ಸಿಗದ; ಮೀರಿದ; ಅತೀತ: above criticism ಟೀಕೆಗೆ ಸಿಗದ; ನಿರಾಕ್ಷೇಪವಾದ. above suspicion ಸಂಶಯಾತೀತವಾದ. above my understanding ನನ್ನ ತಿಳಿವಳಿಕೆಗೆ ಎಟುಕದ.
  7. (ದೊಡ್ಡತನ, ಒಳ್ಳೆಯತನ, ಯೋಗ್ಯತೆಗಳಿಂದ) ಮೇಲಿನ; ಮೇಲ್ಮಟ್ಟದ; ಮೀರಿದ; ಉನ್ನತವಾದ: above meanness ಸಣ್ಣತನವನ್ನು ಮೀರಿದ; ಸಣ್ಣತನವಿಲ್ಲದ. ideas above one’s station ಅಂತಸ್ತಿಗಿಂತ ಮೇಲ್ಮಟ್ಟದ ಭಾವನೆಗಳು.
  8. ಎಲ್ಲಕ್ಕಿಂತ–ಮಿಗಿಲಾಗಿ, ಮುಖ್ಯವಾಗಿ: should value honour above life ಪ್ರಾಣಕ್ಕಿಂತ ಮಿಗಿಲಾಗಿ ಮರ್ಯಾದೆಗೆ ಬೆಲೆ ಕೊಡಬೇಕು.
  9. (ಒಂದಕ್ಕಿಂತ) ಮೇಲಿನ ದರ್ಜೆಯ; ಉನ್ನತ ಪದವಿಯ: a professor is above a reader ಪ್ರೊಹೆಸರು ರೀಡರಿಗಿಂತ ಮೇಲಿನ ಪದವಿಯವನು.
  10. (ನಾಟಕ) ರಂಗದ ಮೇಲುಭಾಗದಲ್ಲಿ.
ಪದಗುಚ್ಛ
  1. above all ಎಲ್ಲಕ್ಕಿಂತ ಮಿಗಿಲಾಗಿ; ಎಲ್ಲಕ್ಕೂ ಮೀರಿ.
  2. above ground ನೆಲದ ಮೇಲೆ.
ನುಡಿಗಟ್ಟು
  1. above ground ಬದುಕಿರುವ; ಜೀವಂತವಾಗಿ; ಪ್ರಾಣಸಹಿತವಾಗಿ.
  2. above one’s head
    1. (ಮುಖ್ಯವಾಗಿ ಒದಗಲಿರುವ ಅಪಾಯದ ವಿಷಯದಲ್ಲಿ) ತಲೆಯ ಮೇಲೆ ತೂಗುತ್ತಿರುವ; ನೆತ್ತಿಯ ಮೇಲಿರುವ.
    2. ಬುದ್ಧಿಗೆ ಎಟುಕದ; ಗ್ರಹಿಕೆಗೆ ಮೀರಿದ:
  3. above one’s means ಆದಾಯಕ್ಕೆ ಮೀರಿದ: live above one’s means ಆದಾಯಕ್ಕೆ ಮೀರಿದ ಖರ್ಚಿನ ಜೀವನ ನಡಸು.
  4. be above oneself ಮೈಮರೆತಿರು; ಪರವಶನಾಗಿರು; ಉಲ್ಲಾಸದಿಂದಿರು: men above themselves with drink ಕುಡಿತದಿಂದ ಮೈಮರೆತಿದ್ದ ಜನ.
  5. get above oneself ಜಂಬಪಡು; ಗರ್ವದಿಂದ ವರ್ತಿಸು; ದುರಹಂಕಾರಪಡು; ಸ್ವಪ್ರತಿಷ್ಠೆ ತೋರು.
See also 1above  2above  4above
3above ಅಬವ್‍
ಗುಣವಾಚಕ

ಹಿಂದಿನ; ಮೇಲೆ ಹೇಳಿದ; ಮೇಲೆ ಉದ್ಧರಿಸಿದ; ಪೂರ್ವೋಕ್ತ: the above statements ಪೂರ್ವೋಕ್ತ ಹೇಳಿಕೆಗಳು.

See also 1above  2above  3above
4above ಅಬವ್‍
ನಾಮವಾಚಕ
  1. ಮೇಲಿರುವುದು; ಮೇಲಿನದು; ಹಿಂದೆ ಹೇಳಿದ್ದು; ಹಿಂದೆ ಹೇಳಿದವರು; ಪೂರ್ವೋಕ್ತ: diagram like the above ಮೇಲಿನಂಥ ನಕ್ಷೆ. refer to the above ಹಿಂದೆ ಹೇಳಿದ್ದನ್ನು ನೋಡು. the above is the owner ಮೇಲೆ ಹೇಳಿದವನು ಇದರ ಒಡೆಯ.
  2. (ಮುಖ್ಯವಾಗಿ ಅಧಿಕಾರದ ವಿಷಯದಲ್ಲಿ) ಮೇಲಿನದು: imposed from above ಮೇಲಿನಿಂದ (ಮೇಲಿನ ಅಧಿಕಾರಿಯಿಂದ) ವಿಧಿಸಿದ್ದು.
  3. ದೇವಲೋಕ: a gift from above ದೇವಲೋಕದ ವರ.