See also 2about  3about
1about ಅಬೌಟ್‍
ಕ್ರಿಯಾವಿಶೇಷಣ
  1. ಹೊರಗೆ; ಸುತ್ತ: ಸುತ್ತಲೂ: compass it about ಅದರ ಸುತ್ತ ಸುತ್ತುವರಿ.
  2. (ಒಂದು ಕೇಂದ್ರದ) ಸುತ್ತಲೂ; ಸುತ್ತಮುತ್ತ: ಎಲ್ಲ–ಕಡೆಗೂ, ದಿಕ್ಕಿಗೂ: look about ಸುತ್ತಲೂ ಯಾ ಸುತ್ತಮುತ್ತ ನೋಡು. he was taking her about a lot these days ಅವಳನ್ನು ಎಲ್ಲ ಕಡೆಗೂ (ಅಂದರೆ ಹೋಟೆಲು, ಸಿನಿಮಾ, ಔತಣ, ಮೊದಲಾದವುಗಳಿಗೆ) ಬಹಳ ಕರೆದುಕೊಂಡು ಹೋಗುತ್ತಿದ್ದ.
  3. ಹತ್ತಿರದಲ್ಲಿ; ಸಮೀಪದಲ್ಲಿ: hang about ಹತ್ತಿರದಲ್ಲಿಯೇ ಸುಳಿದಾಡುತ್ತಿರು.
  4. (ಸಂಖ್ಯೆ, ಪ್ರಮಾಣ, ಗುಣ, ಮೊದಲಾದವುಗಳ ವಿಷಯದಲ್ಲಿ) ಹತ್ತಿರ ಹತ್ತಿರ; ಸರಿಸುಮಾರು; ಹೆಚ್ಚುಕಡಮೆ: about half ಹೆಚ್ಚುಕಡಮೆ ಅರ್ಧದಷ್ಟು. about fifty ಸುಮಾರು ಐವತ್ತು. about right ಹೆಚ್ಚುಕಡಮೆ ಸರಿ. much about ಹತ್ತಿರ ಹತ್ತಿರ. I’m about tired of this ನನಗೆ ಇದರ ಬಗ್ಗೆ ಹೆಚ್ಚುಕಡಮೆ ಬೇಸರ ಹತ್ತಿದೆ.
  5. ಸರದಿಯಲ್ಲಿ; ಪಾಳಿಯಲ್ಲಿ: take turns about ಸರದಿಯಂತೆ ಕೆಲಸದಲ್ಲಿರು. on duty (week and) week about ಕೆಲಸದ ಸರದಿ ವಾರದಲ್ಲಿ.
  6. ಹಿಂದುಮುಂದಾಗಿ; ವಿರುದ್ಧ ದಿಕ್ಕಿಗೆ ತಿರುಗಿ: right about turn ಬಲಕ್ಕೆ ತಿರುಗಿ ಹಿಂದು ಮುಂದಾಗು. right about face = right about turn. about turn (ಸೈನ್ಯ ಮೊದಲಾದವುಗಳ ಕವಾಯತ್ತಿನಲ್ಲಿ ಒಂದು ಆಜ್ಞೆ) ಹಿಂದು ಮುಂದಾಗು. about face (ಅಮೆರಿಕನ್‍ ಪ್ರಯೋಗ) = about turn. the wrong way about ವಿರುದ್ಧ ದಿಕ್ಕಿನಲ್ಲಿ.
  7. (ಒಂದರಲ್ಲಿ) ತೊಡಗಿ; ಮಾಡುತ್ತ; ನಿರತನಾಗಿ; ಉದ್ಯುಕ್ತನಾಗಿ: the building which is now about ಈಗ ಕಟ್ಟಲಾಗುತ್ತಿರುವ ಕಟ್ಟಡ.
  8. ಅಲ್ಲಿ ಇಲ್ಲಿ; ಅಲ್ಲಲ್ಲಿ; ಚೆಲ್ಲಾಪಿಲ್ಲಿಯಾಗಿ; ಅಸ್ತವ್ಯಸ್ತವಾಗಿ: tools lying about ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಉಪಕರಣಗಳು. measles is about ದಡಾರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. move about ಅಲ್ಲಿಂದಿಲ್ಲಿಗೆ ಸುತ್ತಾಡು.
  9. ಕಾರ್ಯಗತಿಯಲ್ಲಿ; ಘಟನಾವಳಿಯ ಗತಿಯಲ್ಲಿ: brought it about (ಕಾರ್ಯಗತಿಯಲ್ಲಿ) ಅದನ್ನು ಮಾಡಿದೆ; ಅದು ಆಗುವಂತೆ ಮಾಡಿದೆ. it came about(ಘಟನೆಗಳ ಅನುಕ್ರಮದಂತೆ) ಅದು ಸಂಭವಿಸಿತು.
ಪದಗುಚ್ಛ
  1. come about
    1. (ಕಾಲದ ವಿಷಯದಲ್ಲಿ) ಒಂದು ಸುತ್ತು ಬರು, ಸುತ್ತು.
    2. ಆಗು; ಸಂಭವಿಸು
  2. go about (ಕೆಲಸಕ್ಕೆ) ತೊಡಗು; ಆರಂಭಿಸು.
  3. put about (ಹೋಗುತ್ತಿರುವ ಹಡಗನ್ನು) ಬೇರೆ ದಿಕ್ಕಿಗೆ ತಿರುಗಿಸು.
  4. see about = ಪದಗುಚ್ಛ \((2)\).
ನುಡಿಗಟ್ಟು
  1. am about to do ಇನ್ನೇನು ಮಾಡುವುದರಲ್ಲಿದ್ದೇನೆ.
  2. go a long way about ಕೊಂಕಣ ಸುತ್ತಿ ಮೈಲಾರಕ್ಕೆ ಹೋಗು; ಬಳಸು ದಾರಿ ಹಿಡಿ.
  3. out and about (ಮುಖ್ಯವಾಗಿ ಕಾಯಿಲೆ ಬಿದ್ದು ಚೇತರಿಸಿಕೊಂಡ ಮೇಲೆ) ಹಾಸಿಗೆಯಿಂದ ಎದ್ದು ಓಡಾಡುತ್ತ; ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿ.
  4. the other way about ತದ್ವಿರುದ್ಧವಾಗಿ; ತಿರುಗುಮುರುಗಾಗಿ.
  5. to bring about
    1. ಆಗಮಾಡಿಸು; ನೆರವೇರಿಸು; ಜಾರಿಗೆ ತರು.
    2. (ಒಂದು ಸುತ್ತು) ಸುತ್ತಿಸು; ತಿರುಗಿಸು.
  6. up and about (ನಿದ್ದೆ ಯಾ ಕಾಯಿಲೆಯಿಂದ) ಎದ್ದು; ಚೇತರಿಸಿಕೊಂಡು.
See also 1about  3about
2about ಅಬೌಟ್‍
ಉಪಸರ್ಗ
  1. ಹೊರಗೆ; ಸುತ್ತಲೂ: the fields about Mysore ಮೈಸೂರಿನ ಸುತ್ತಲೂ ಇರುವ ಜಮೀನು.
  2. ಅಲ್ಲಿ; ಸ್ಥಳದಲ್ಲಿ; ಜಾಗದಲ್ಲಿ: about street corners ರಸ್ತೆಯ ಮೂಲೆಗಳಲ್ಲಿ. he is about my path ಅವನು ನನ್ನ ದಾರಿಯಲ್ಲಿದ್ದಾನೆ.
  3. (ಒಂದು ಕೇಂದ್ರದಿಂದ) ಸುತ್ತುಮುತ್ತ; ಸುತ್ತಲೂ; ಎಲ್ಲ-ಕಡೆಯಲ್ಲಿಯೂ, ದಿಕ್ಕಿನಲ್ಲಿಯೂ: look about you ನಿನ್ನ ಸುತ್ತಲೂ ನೋಡು. traveling about the world ಪ್ರಪಂಚದ ಎಲ್ಲ ಕಡೆಗೂ ಹೋಗುತ್ತ.
  4. ಹತ್ತಿರ; ಸಮೀಪದಲ್ಲಿ: people about us ನಮ್ಮ ಹತ್ತಿರದಲ್ಲಿರುವ ಜನ. objects about us ನಮ್ಮ ಸುತ್ತಮುತ್ತಲ ವಸ್ತುಗಳು.
  5. ಒಯ್ದ; ಹತ್ತಿರ ಇಟ್ಟುಕೊಂಡ: I have no money about me ನನ್ನ ಹತ್ತಿರ (ಯಾ ನನ್ನ ಜೇಬಿನಲ್ಲಿ) ಸ್ವಲ್ಪವೂ ಹಣವಿಲ್ಲ.
  6. ಅಲ್ಲಿ ಇಲ್ಲಿ; ಚೆಲ್ಲಾಪಿಲ್ಲಿಯಾಗಿ; ಅಸ್ತವ್ಯಸ್ತವಾಗಿ: dotted about the fields ಚುಕ್ಕೆ ಹೊಯ್ದಂತೆ ಜಮೀನಿನಲ್ಲಿ ಚೆಲ್ಲಿರುವ.
  7. ಹತ್ತಿರ ಹತ್ತಿರ; ಹೆಚ್ಚುಕಡಮೆ ನನ್ನ ಗಾತ್ರ.
  8. ತೊಡಗಿ; ನಿರತನಾಗಿ; ಉದ್ಯುಕ್ತನಾಗಿ: about my father’s business ನನ್ನ ತಂದೆಯ ವ್ಯಾಪಾರದಲ್ಲಿ ತೊಡಗಿ. send him about his business ಅವನ ಕೆಲಸದಲ್ಲಿ ತೊಡಗಿರುವಂತೆ, ಅವನ ಕೆಲಸ ನೋಡಿಕೊಳ್ಳುವಂತೆ–ಕಳುಹಿಸು. what are you about? ನೀನು ಯಾವುದರಲ್ಲಿ ತೊಡಗಿದ್ದೀಯೆ? ನೀನು ಏನು ಮಾಡಲು ಹೊರಟಿದ್ದೀಯೆ? while you are about it ನೀನು ಅದನ್ನು ಮಾಡುತ್ತಿರುವಾಗ; ನೀನು ಅದರಲ್ಲಿ ತೊಡಗಿರುವಾಗ.
  9. ಒಂದನ್ನು ಕುರಿತು; ಒಂದರ–ಬಗ್ಗೆ, ವಿಷಯವಾಗಿ; ಒಂದಕ್ಕೆ ಸಂಬಂಧಿಸಿದಂತೆ: quarrels about money ಹಣದ ವಿಷಯವಾಗಿ ಜಗಳಗಳು. have read about it ಅದನ್ನು ಕುರಿತು ಓದಿದ್ದೇವೆ. symmetry about a line ರೇಖೆಗೆ ಸಂಬಂಧಿಸಿದಂತೆ ಸಮಸೂತ್ರತೆ ಯಾ ಸಮಪಾರ್ಶ್ವತೆ.
ಪದಗುಚ್ಛ
  1. how about ಯಾ what about ಆ ಬಗ್ಗೆ; ಆ ವಿಷಯವಾಗಿ: what about his qualifications for the post? ಈ ಹುದ್ದೆಗೆ ಅವನಿಗಿರುವ ಯೋಗ್ಯತೆಗಳ ಬಗ್ಗೆ ಏನು (ಹೇಳುತ್ತೀಯೆ, ಅಭಿಪ್ರಾಯ ಪಡುತ್ತೀಯೆ)? how about going to Bangalore tomorrow? ನಾಳೆ ಬೆಂಗಳೂರಿಗೆ ಹೋಗುವ ವಿಷಯವಾಗಿ ಏನು?
  2. man about town (ಮುಖ್ಯವಾಗಿ ಲಂಡನ್‍ ನಗರದ) ಷೋಕಿ ನಗರವಾಲ; ಷೋಕಿದಾರ ಪಟ್ಟಣಿಗ.
See also 1about  2about
3about ಅಬೌಟ್‍
ಸಕರ್ಮಕ ಕ್ರಿಯಾಪದ

(ಹಡಗಿನ) ದಿಕ್ಕು ಬದಲಾಯಿಸು: (ಹಡಗನ್ನು) ವಿರುದ್ಧ ದಿಕ್ಕಿಗೆ ತಿರುಗಿಸು.